

RCB vs MI: ಇಂದು (ಏ.07) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ.
ಅಂತೆಯೇ ಮೊದಲು ಬ್ಯಾಟ್ ಮಾಡುತ್ತಿರುವ ಆರ್ಸಿಬಿಗೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ವಿಕೆಟ್ ಶೀಘ್ರವೇ ಪತನಗೊಂಡರೆ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಮೈದಾನದ ಸುತ್ತಲ್ಲೇ ಸ್ಫೋಟಕ ಬ್ಯಾಟಿಂಗ್ ದಾಳಿ ನಡೆಸಿದರು. ಸಾಲ್ಟ್ ಪೆವಿಲಿಯನ್ನತ್ತ ಮುಖಮಾಡಿದ ಬೆನ್ನಲ್ಲೇ ಕಣಕ್ಕಿಳಿದ ದೇವದತ್ತ ಪಡಿಕ್ಕಲ್ ಕೂಡ ಸ್ಫೋಟಕ ಇನ್ನಿಂಗ್ಸ್ ಪ್ರಾರಂಭಿಸಿ, ಉತ್ತಮ ಆರಂಭಕ್ಕೆ ಕೊಡುಗೆ ನೀಡಿದರು.
ಇನ್ನು ತಂಡದ ಪರ ಉತ್ತಮ ರನ್ ಕಲೆಹಾಕುತ್ತಿದ್ದ ಕೊಹ್ಲಿ ಮತ್ತು ಪಡಿಕ್ಕಲ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ ನಂತರ ಅಖಾಡದಲ್ಲಿ ಅಬ್ಬರಿಸಲು ಪ್ರಾರಂಭಿಸಿದ ರಜತ್ ಪಟಿದಾರ್, ಬ್ಯಾಟರ್ ಮಾತ್ರವಲ್ಲದೇ ಕ್ಯಾಪ್ಟನ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ರಜತ್ ಮತ್ತು ಜಿತೇಶ್ ಶರ್ಮ ಜತೆಯಾಟ ತಂಡದ
ಫಿಲ್ ಸಾಲ್ಟ್ (4 ರನ್, 2 ಎಸೆತ)
ವಿರಾಟ್ ಕೊಹ್ಲಿ (67 ರನ್, 42 ಎಸೆತ)
ದೇವದತ್ತ ಪಡಿಕ್ಕಲ್ (37 ರನ್, 22 ಎಸೆತ)
ಲಿಯಾಮ್ ಲಿವಿಂಗ್ಸ್ಟೋನ್ (0 ರನ್, 2 ಎಸೆತ)
ರಜತ್ ಪಟಿದಾರ್ (64 ರನ್, 32 ಎಸೆತ)
ಜಿತೇಶ್ ಶರ್ಮ ( 40 ರನ್, 18 ಎಸೆತ)
ಟಿಮ್ ಡೇವಿಡ್ (1 ರನ್, 1 ಎಸೆತ)