

RCB vs LSG: ಇಂದು (ಮೇ.27) ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್ಸಿಬಿಗೆ ಇದೀಗ ಸವಾಲಿನ ಗುರಿ ಎದುರಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ, 20 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು. ಆರಂಭಿಕರಾದ ಮಿಚೆಲ್ ಮಾರ್ಷ್ (37 ಎಸೆತ, 67 ರನ್) ಮತ್ತು ಕ್ಯಾಪ್ಟನ್ ರಿಷಭ್ ಪಂತ್ (61 ಎಸೆತ, 118 ರನ್) ಸ್ಫೋಟಕ ಇನ್ನಿಂಗ್ಸ್ ತಂಡದ ಮೊತ್ತವನ್ನು 200ರ ಗಡಿದಾಟಿಸಿತು. 227 ರನ್ಗಳ ಬೃಹತ್ ಹಾಗೂ ಸವಾಲಿನ ಗುರಿಯನ್ನು ಆರ್ಸಿಬಿ ಬೆನ್ನಟ್ಟಲಿದೆಯಾ ಅಥವಾ ಸೋತು, ಅಂಕಪಟ್ಟಿಯ ಅಗ್ರ-2 ಸ್ಥಾನವನ್ನು ಕಳೆದುಕೊಳ್ಳಲಿದೆಯಾ? ಎಂಬುದನ್ನು ಎರಡನೇ ಇನ್ನಿಂಗ್ಸ್ ನೋಡಿ ತಿಳಿಯಬೇಕಿದೆ.