ವಿರಾಟ್​ ಕೊಹ್ಲಿ ಬ್ಯಾಟಿಂಗ್​ಗೆ ಆರ್​ಸಿಬಿ ತಂಡದ ಸಹ-ಆಟಗಾರ ಕ್ಯಾಮರಾನ್​ ಗ್ರೀನ್​ ಫಿದಾ!

web geen
Published on

ಧರ್ಮಶಾಲಾ: ಸತತ 4ನೇ ಜಯದೊಂದಿಗೆ ಆರ್​ಸಿಬಿ ತಂಡದ ಪ್ಲೇಆಫ್​​ ಆಸೆ ಜೀವಂತವಿರಿಸಲು ನೆರವಾದ ವಿರಾಟ್​ ಕೊಹ್ಲಿ ಅವರ ಅಮೋ ಇನಿಂಗ್ಸ್​ಅನ್ನು ಸಹ&ಆಟಗಾರ ಕ್ಯಾಮರಾನ್​ ಗ್ರೀನ್​ ಮುಕ್ತಕಂಠದಿಂದ ಹೊಗಳಿದ್ದಾರೆ.

3 ಜೀವದಾನಗಳ ಭರ್ಜರಿ ಲಾಭ ಪಡೆದ ಕೊಹ್ಲಿ 47 ಎಸೆತಗಳಲ್ಲಿ 92 ರನ್​ ಸಿಡಿಸುವ ಮೂಲಕ ಆರ್​ಸಿಬಿ 241 ರನ್​ ಪೇರಿಸಲು ನೆರವಾದರು. ಜತೆಗೆ ಗ್ರೀನ್​ ಜತೆಗೆ 46 ಎಸೆತಗಳಲ್ಲಿ 92 ರನ್​ ಜತೆಯಾಟವಾಡಿದರು. "ಕೊಹ್ಲಿ ಆಟವನ್ನು ಮತ್ತೊಂದು ಬದಿಯಿಂದ ನೋಡಿ ಆನಂದಿಸಿದೆ. ಅವರನ್ನು ನನ್ನ ತಂಡದಲ್ಲಿ ಹೊಂದಿರುವುದು ಖುಷಿಯ ವಿಷಯ. ಎದುರಾಳಿಯಾಗಿ ಅವರನ್ನು ನಿಯಂತ್ರಿಸುವುದು ಕಷ್ಟಕರ' ಎಂದು ಗ್ರೀನ್​ ಪಂಜಾಬ್​ ಕಿಂಗ್ಸ್​ ವಿರುದ್ಧದ 60 ರನ್​ ಗೆಲುವಿನ ಬಳಿಕ ಹೇಳಿದ್ದಾರೆ.

ಸ್ವಪ್ನಿಲ್​ ಸಿಂಗ್​ (28ಕ್ಕೆ 2), ಮೊಹಮದ್​ ಸಿರಾಜ್​ (43ಕ್ಕೆ 3), ಲಾಕಿ ಫಗ್ಯುರ್ಸನ್​ (29ಕ್ಕೆ 2) ಮತ್ತು ಕರ್ಣ್​ ಶರ್ಮ (36ಕ್ಕೆ 2) ಅವರ ಸಂಟಿತ ದಾಳಿಗೆ ನಲುಗಿದ ಪಂಜಾಬ್​ ಕಿಂಗ್ಸ್​ 17 ಓವರ್​ಗಳಲ್ಲಿ 181 ರನ್​ಗಳಿಗೆ ಸರ್ವಪತನ ಕಂಡು ಪ್ಲೇಆ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದಿತು. ರಿಲೀ ರೋಸೌ (61) ಹೋರಾಟದ ಬಳಿಕ ಪಂಜಾಬ್​ ಸಂಪೂರ್ಣವಾಗಿ ಲಯ ತಪ್ಪಿತು. ಪಂಜಾಬ್​ ಕಿಂಗ್ಸ್​ ಐಪಿಎಲ್​ನಲ್ಲಿ ಸತತ 10 ಬಾರಿ ಪ್ಲೇಆಫ್​​ ಪ್ರವೇಶಿಸಲು ವಿಫಲವಾದ ಮೊದಲ ತಂಡವೆನಿಸಿದೆ. ಇದುವರೆಗೆ ಎಲ್ಲ 17 ಐಪಿಎಲ್​ ಆವೃತ್ತಿಗಳಲ್ಲಿ ಆಡಿರುವ ಪಂಜಾಬ್​ ಕಿಂಗ್ಸ್​ 2 ಬಾರಿ (2008, 2014) ಮಾತ್ರ ಸೆಮಿಫೈನಲ್​ ಅಥವಾ ಪ್ಲೇಆಫ್​ ಪ್ರವೇಶಿಸಿದೆ.

*ನಮಗಿದು ಉತ್ತಮ ಪಂದ್ಯವೆನಿಸಿತು. ಟಾಸ್​ ಸೋತ ಬಳಿಕ 240 ಪ್ಲಸ್​ ಮೊತ್ತ ಪೇರಿಸಿದೆವು. ಬ್ಯಾಟಿಂಗ್​ನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರುವುದು ಲ ನೀಡುತ್ತಿದೆ. ನಾವು ಇದೇ ರೀತಿಯ ಆಟ ಮುಂದುವರಿಸಲು ಬಯಸಿದ್ದೇವೆ.

| ಫಾಫ್​ ಡು ಪ್ಲೆಸಿಸ್​, ಆರ್​ಸಿಬಿ ನಾಯಕ

*ನಿರಾಸೆಯಾಗಿದೆ. ನಮಗೆ ಬೇಕಾದಷ್ಟು ಗೆಲುವು ಸಾಧಿಸಲಾಗಲಿಲ್ಲ. ಮುಂದಿನ ವರ್ಷ ದಿಟ್ಟ ಪುನರಾಗಮನ ಕಾಣಲಿದ್ದೇವೆ. ತಂಡವನ್ನು ಮುನ್ನಡೆಸುವುದನ್ನು ಆನಂದಿಸುತ್ತಿರುವೆ. ಇನ್ನೂ ಕೆಲ ಪಂದ್ಯ ಜಯಿಸಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು.

| ಸ್ಯಾಮ್​ ಕರನ್​, ಪಂಜಾಬ್​ ಕಿಂಗ್ಸ್​ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net