RCB ಫ್ಯಾನ್ಸ್​ ಹೇಳ್ತಿರೋದು ಇದೊಂದೇ ವಿಚಾರ! ಇದು ಸರಿಯಾದ್ರೆ ಎಲ್ಲಾ ಬದಲಾಗುತ್ತೆ ಅಂತಿದ್ದಾರೆ…

WhatsApp Image 2024-04-03 at 2.24.43 PM
Published on

ಬೆಂಗಳೂರು: ಕಳೆದ 16 ವರ್ಷಗಳಿಂದ ಐಪಿಎಲ್​ ಕಪ್​ ಗೆಲ್ಲದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿಯಾದರೂ ಉತ್ತಮ ಓಪನಿಂಗ್ ಕೊಟ್ಟು ಗೆಲುವಿನ ದಡ ಸೇರುತ್ತದೆ, ಅಂಕಪಟ್ಟಿಯಲ್ಲಿ ಟಾಪ್​ 4ರೊಳಗೆ ಸ್ಥಾನ ಪಡೆಯಲಿದೆ ಎಂದೆಲ್ಲಾ ದೊಡ್ಡ ನಿರೀಕ್ಷೆ, ಭರವಸೆಗಳನ್ನು ಹೊತ್ತು ಮ್ಯಾಚ್​ ನೋಡುತ್ತಿರುವ ಸಹಸ್ರಾರು ಸಂಖ್ಯೆಯ ಅಭಿಮಾನಿಗಳಿಗೆ ಎದುರಾಗುತ್ತಿರುವುದು ಎಂದಿನಂತೆ ಅದೇ ಬೇಸರ, ಅದೇ ದುಃಖ.

ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್​ಸಿಬಿಗೆ ಎಲ್ಲೇ ಮೀರಿದ ಪ್ರೀತಿ, ಅಭಿಮಾನ ಕೊಟ್ಟು ಪ್ರತಿ ಪಂದ್ಯದಲ್ಲೂ ಅಪಾರ ಪ್ರೋತ್ಸಾಹ ನೀಡುವ ಫ್ಯಾನ್ಸ್​ಗೆ ಎದುರಾಗುತ್ತಿರುವುದು ಆಘಾತ! ಇದು ನಿನ್ನೆ ನಡೆದ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಮ್ಯಾಚ್​ನಲ್ಲಿಯೂ ಇದೇ ಅನುಭವ ಉಂಟಾಯಿತು. ಐಪಿಎಲ್​ 2024ರ 17ನೇ ಸೀಸನ್​ಗೂ ಮುನ್ನ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ವಿರಾಟ್​ ಹೆಮ್ಮೆಯಿಂದ ಹೇಳಿದ್ದರು. ಆದರೆ, ಇದು ಪಂದ್ಯಗಳು ಶುರುವಾದ ಮೇಲೆ ಮಾಸಿ ಹೋಗ್ತಿರೋದು ಏಕೆ ಎಂದು ಪ್ರಶ್ನಿಸಿದ್ದಾರೆ.

17ನೇ ಸೀಸನ್ ಆರಂಭಿಕ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತ ಆರ್​ಸಿಬಿ ತದನಂತರ ಒಂದು ಮ್ಯಾಚ್ ಗೆದ್ದು ಉಳಿದ ಪಂದ್ಯವನ್ನೆಲ್ಲಾ ಕೈಚೆಲ್ಲಿದೆ. ಇದೀಗ ನಿನ್ನೆಯ ಪಂದ್ಯದಲ್ಲಿಯೂ ಸಹ ಹೀನಾಯ ಸೋಲು ಅನುಭವಿಸಿದ ಆರ್​ಸಿಬಿ ವಿರುದ್ಧ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನಿಂದಲೂ ಇದೇ ಹಣಬರಹ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿ ಆಗ್ತಿರೋದು ಆರ್​ಸಿಬಿ ಆಟಗಾರರ ತಪ್ಪಲ್ಲ! ಬದಲಿಗೆ ಮ್ಯಾನೆಜ್​ಮೆಂಟ್​ದು ಎಂದು ದೂರುತ್ತಿರುವ ಕ್ರಿಕೆಟ್ ಫ್ಯಾನ್ಸ್, ಟೀಮ್ ಆಟಗಾರರ ಪ್ರಕ್ರಿಯೆಯಲ್ಲಿ ಆರ್​ಸಿಬಿ ಮ್ಯಾನೆಜ್​ಮೆಂಟ್​ ಬಹಳ ಬೇಜವಾಬ್ದಾರಿ ತೋರುತ್ತಿದೆ. ಇತರೆ ಟೀಮ್​ಗಳು ಅಷ್ಟು ಚಾಣಕ್ಷತೆಯಿಂದ ಕಡಿಮೆ ಬಜೆಟ್​ನಲ್ಲಿ ಒಳ್ಳೊಳ್ಳೆ ಯುವ ಆಟಗಾರರನ್ನು ತಮ್ಮ ತಂಡಕ್ಕೆ ಆಯ್ದುಕೊಳ್ಳುತ್ತದೆ. ಬೌಲಿಂಗ್ ಲೈನ್​ನಲ್ಲಿ ಅತ್ಯುತ್ತಮ ಲೈನ್​ಅಪ್​ ಇಲ್ಲವೇ ಇಲ್ಲ. ಈ ಸಮಸ್ಯೆ ಇಂದಿನದ್ದಲ್ಲ. ನಮಗೆ ಕಾಣಿಸ್ತಿರುವ ವಿಷಯ ಇವರಿಗ್ಯಾಕೆ ಅರ್ಥವಾಗ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬ್ಯಾಟಿಂಗ್ ಲೈನ್​ನಲ್ಲಿ ಕೆಜಿಎಫ್ ಅಥವಾ ಕೇವಲ ವಿರಾಟ್​ ಬ್ಯಾಟ್ ಮಾಡಿದ್ರೆ ಸಾಕಾ? ಇಡೀ ತಂಡದಲ್ಲಿ ಬೌಲಿಂಗ್ ಯೂನಿಟ್​ ಪ್ರಮುಖ ಪಾತ್ರವಹಿಸಬೇಕು. ಮ್ಯಾನೆಜ್​ಮೆಂಟ್​ನವರಿಗೆ ಈ ಸಮಸ್ಯೆ ಏಕೆ ಅರ್ಥವಾಗ್ತಿಲ್ಲ ಎಂಬುದೇ ನಮಗೆ ತಿಳಿಯುತ್ತಿಲ್ಲ. ಇದೊಂದು ಬದಲಾದರೆ ಖಂಡಿತ ಆರ್​ಸಿಬಿಗೆ ಗೆಲುವು ಖಚಿತ ಎಂದು ಫ್ಯಾನ್ಸ್​ ಅಭಿಪ್ರಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net