ಬೆಂಗಳೂರಿನಲ್ಲಿ ಆರ್‌ಸಿಬಿ ಕೂಡಿಕೊಂಡ ಕೊಹ್ಲಿ:ವಿದೇಶಿ ಕ್ರಿಕೆಟಿಗರೂ ತಂಡಕ್ಕೆ ಸೇರ್ಪಡೆ

New Project (1)
Published on

ಬೆಂಗಳೂರು: ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶನಿವಾರ ಬೆಂಗಳೂರಿಗೆ ಬಂದಿಳಿದರು. ಮುಂಬರುವ ಐಪಿಎಲ್ 18ನೇ ಆವೃತ್ತಿಗೆ ಪೂವಭಾವಿಯಾಗಿ ಆರ್‌ಸಿಬಿ ತಂಡದ ಆಟಗಾರರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದು, ಭಾನುವಾರದಿಂದ ಕೊಹ್ಲಿ ಕೂಡ ನೆಟ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿದೇಶಿ ಹಾಗೂ ದೇಶೀಯ ಆಟಗಾರರು ಕೋಚ್ ಆಂಡಿ ್ಲವರ್ ಮಾರ್ಗದರ್ಶನದಲ್ಲಿ ಸಿದ್ಧತೆ ಆರಂಭಿಸಿದ್ದು, ವಿರಾಟ್ ಕೊಹ್ಲಿ ಆಗಮನದ ವಿಡಿಯೊ ಆರ್‌ಸಿಬಿ ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪಡುಕೋಣೆ-ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಆರ್‌ಸಿಬಿ ್ರಾಂಚೈಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗವಹಿಸಿದರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಫಿಟ್ ಆಗಿರುವ ಇಂಗ್ಲೆಂಡ್‌ನ ಜೇಕಬ್ ಬೆಥೆಲ್, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಆಸೀಸ್‌ನ ಜೋಶ್ ಹ್ಯಾಸಲ್‌ವುಡ್, ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್‌ಗಿಡಿ ಕೂಡ ಈಗಾಗಲೆ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಸತತ 17 ವರ್ಷಗಳ ಪ್ರಶಸ್ತಿ ಬರ ನೀಗಿಸುವ ಹಂಬಲದಲ್ಲಿರುವ ಆರ್‌ಸಿಬಿ ತಂಡವನ್ನು ಈ ಬಾರಿ ರಜರ್ ಪಾಟೀದಾರ್ ಮುನ್ನಡೆಸಲಿದ್ದು, ಮಾ.22ರಂದು ಹಾಲಿ ಚಾಂಪಿಯನ್ ಕೆಕೆಆರ್ ಎದುರು ತನ್ನ ಅಭಿಯಾನ ಆರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net