VIDEO| ದಕ್ಷಿಣ ಆಫ್ರಿಕಾದಲ್ಲೂ ಆರ್​ಸಿಬಿ ಹವಾ! ಸೆಂಚುರಿಯನ್​ ಟೆಸ್ಟ್​ ನಡುವೆ ಆರ್​ಸಿಬಿ ಜೆರ್ಸಿಗೆ ಕೊಹ್ಲಿ ಆಟೋಗ್ರಾಫ್​!

rcb kohli web
Published on

ಸೆಂಚುರಿಯನ್​: ಆರ್​ಸಿಬಿ ತಂಡಕ್ಕೆ ಬರೀ ಬೆಂಗಳೂರು, ಕರ್ನಾಟಕ, ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ ಎಂಬುದು ಬುಧವಾರ ಸಾಬೀತುಗೊಂಡಿದೆ. ಸೆಂಚುರಿಯನ್​ನಲ್ಲಿ ನಡೆಯುತ್ತಿರುವ ಆತಿಥೇಯ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ 2ನೇ ದಿನದಾಟದ ವೇಳೆ ವಿರಾಟ್​ ಕೊಹ್ಲಿ ಆರ್​ಸಿಬಿ ತಂಡದ ಜೆರ್ಸಿಯೊಂದಿಗೆ ಆಗಮಿಸಿದ ಸ್ಥಳಿಯ ಬಾಲಕನೊಬ್ಬನಿಗೆ ಹಸ್ತಾಕ್ಷರ ನೀಡಿದ್ದು ವಿಶೇಷವಾಗಿತ್ತು.

ಆರ್​ಸಿಬಿ ತಂಡದ ಜೆರ್ಸಿ ಮೇಲೆಯೇ ನನಗೆ ವಿರಾಟ್​ ಕೊಹ್ಲಿ ಆಟೋಗ್ರಾಫ್​ ಬೇಕೆಂದು ಆ ಬಾಲಕ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಹೀಗಾಗಿ ಭೋಜನ ವಿರಾಮದ ವೇಳೆ ವಿರಾಟ್​ ಕೊಹ್ಲಿ ಆ ಬಾಲಕನ ಆಸೆ ಪೂರೈಸಿದರು.

ಕೊಹ್ಲಿ ಆರ್​ಸಿಬಿ ಜೆರ್ಸಿ ಮೇಲೆ ಸಹಿ ಮಾಡಿ ಬಾಲಕನನ್ನು ಖುಷಿಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿರಾಟ್​ ಕೊಹ್ಲಿ 2008ರ ಐಪಿಎಲ್​ ಮೊದಲ ಆವೃತ್ತಿಯಿಂದಲೂ ಆರ್​ಸಿಬಿ ತಂಡದಲ್ಲೇ ಇದ್ದು, ಐಪಿಎಲ್​ನಲ್ಲಿ 17 ಆವೃತ್ತಿಗಳಲ್ಲೂ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರರೆನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net