ಇಂದು ಡೆಲ್ಲಿ ಕ್ಯಾಪಿಟಲ್ಸ್ - ಆರ್‌ಸಿಬಿ ಹಣಾಹಣಿ

rcb and delhi for web
Published on

ದುಬೈ: ಪ್ಲೇಆಫ್ ಹಂತ ಖಚಿತಪಡಿಸಿಕೊಂಡಿರುವ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-14ರ ಕಡೇ ಲೀಗ್ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ. ಗುರುವಾರ ನಡೆದ ಹಣಾಹಣಿಯಲ್ಲಿ ಪಂಜಾಬ್ ಎದುರು ಸಿಎಸ್‌ಕೆ ಸೋಲನುಭವಿಸಿದ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತರೂ, ಗೆದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಕ್ಕಾ ಆಗಿದೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಹಣಾಹಣಿಯಲ್ಲಿ ಆರ್‌ಸಿಬಿ ತಂಡ 1 ರನ್‌ನಿಂದ ರೋಚಕ ಜಯ ದಾಖಲಿಸಿತ್ತು. ಈಗಾಗಲೇ ಮೂರನೇ ಸ್ಥಾನ ಖಚಿತಪಡಿಸಿಕೊಂಡಿರುವ ಆರ್‌ಸಿಬಿ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ.

ಆರ್‌ಸಿಬಿ ತಂಡ ಭಾರಿ ಅಂತರದಲ್ಲಿ ಗೆದ್ದರಷ್ಟೇ ಎರಡನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಬುಧವಾರ ಸನ್‌ರೈಸರ್ಸ್‌ ಎದುರು ಬೌಲರ್‌ಗಳು ಉತ್ತಮ ನಿರ್ವಹಣೆ ತೋರಿದ್ದರೂ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಸೋಲಿಗೆ ಶರಣಾಗಿತ್ತು. ಕಳೆದ ಆವೃತ್ತಿಯಲ್ಲಿ ಒಂದೂ ಸಿಕ್ಸರ್ ಸಿಡಿಸಲು ವಿಫಲರಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ತಂಡಕ್ಕೆ ಆಸರೆಯಾಗಿದ್ದಾರೆ. ಆರ್‌ಸಿಬಿ ಎದುರು ಮೊದಲ ಹಣಾಹಣಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಮುಖಾಮುಖಿ: 26, ಆರ್‌ಸಿಬಿ: 15, ಡೆಲ್ಲಿ: 10, ರದ್ದು: 1

ಹಿಂದಿನ ಮುಖಾಮುಖಿ: ಆರ್‌ಸಿಬಿಗೆ 1 ರನ್ ಜಯ

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

*ಏಕಕಾಲದಲ್ಲಿ 2 ಪಂದ್ಯ

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಏಕಕಾಲದಲ್ಲಿ 2 ಪಂದ್ಯಗಳು ನಡೆಯಲಿವೆ. ಕೊನೆಯಲ್ಲಿ ಆಡುವ 2 ತಂಡಗಳಿಗಷ್ಟೇ ಪ್ಲೇಆ್ ಲೆಕ್ಕಾಚಾರದನ್ವಯ ಆಡುವ ಲಾಭ ತಪ್ಪಿಸಲು ಬಿಸಿಸಿಐ ಇತ್ತೀಚೆಗೆ ಈ ನಿರ್ಧಾರ ಕೈಗೊಂಡಿತ್ತು. ಆದರೂ ಬಿಸಿಸಿಐನ ಈ ನಡೆ ಯಾವುದೇ ಪರಿಣಾಮಕಾರಿ ಎನಿಸಿಲ್ಲ. ಯಾಕೆಂದರೆ ಪ್ಲೇಆ್ ಪೈಪೋಟಿಯಲ್ಲಿರುವ ಕೆಕೆಆರ್ ತಂಡ ಆಡಿದ ಮರುದಿನ ಲೆಕ್ಕಾಚಾರದನ್ವಯ ಆಡುವ ಅವಕಾಶ ಮುಂಬೈಗೆ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net