

ನವದೆಹಲಿ : ಯುಎಇಯಲ್ಲಿ ನಡೆಯಲಿರುವ ಟಿ20 ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿಯ ನಂತರ ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಕೆಲಸಕ್ಕೆ ಆಲ್ರೌಂಡರ್ ರವಿ ಶಾಸ್ತ್ರಿ ಅವರು ಗುಡ್ಬೈ ಹೇಳಲಿದ್ದಾರೆ ಎನ್ನಲಾಗಿದೆ. ಅವರೊಂದಿಗೆ ಹಾಲಿ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಂ ರಾಥೌರ್ ಅವರ ಸ್ಥಾನಕ್ಕೂ ಬೇರೆ ಕೋಚ್ಗಳ ನೇಮಕವಾಗಲಿದೆ ಎಂದು ವರದಿಗಳು ತಿಳಿಸಿವೆ.
2017 ರಿಂದ ಟೀಂ ಇಂಡಿಯಾದ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡಿರುವ ರವಿ ಶಾಸ್ತ್ರಿ ಅವರ ಕಾರ್ಯಾವಧಿಯು ಕಾಂಟ್ರ್ಯಾಕ್ಟ್ ಪ್ರಕಾರ ನವೆಂಬರ್ನಲ್ಲಿ ಮುಗಿಯಲಿದೆ. ತದನಂತರ ತಾವು ತಂಡದೊಂದಿಗೆ ಮುಂದುವರಿಯುವುದಿಲ್ಲ ಎಂದು ಶಾಸ್ತ್ರಿ ಕ್ರಿಕೆಟ್ ಬೋರ್ಡ್ನ ಕೆಲವು ಸದಸ್ಯರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತ ಕ್ರಿಕೆಟ್ ಬೋರ್ಡ್ ಕೂಡ ಹೊಸ ಕೋಚ್ಗಳ ಗುಂಪನ್ನು ನಿಯುಕ್ತಿ ಮಾಡುವ ಆಲೋಚನೆ ಹೊಂದಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. (ಏಜೆನ್ಸೀಸ್)