ರಣಜಿ ಟ್ರೋಫಿ | ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಶುಭಮಾನ್​ಗೆ ಪೂರ್ಣ ದಂಡ

shubhaman Gill 9 JAN 20
Published on

ನವದೆಹಲಿ: ಯುವ ಬ್ಯಾಟ್ಸ್​ಮನ್ ಶುಭಮಾನ್ ಗಿಲ್ ರಣಜಿ ಟ್ರೋಫಿ ಪಂದ್ಯ ವೇಳೆ ಅಂಪೈರ್ ತೀರ್ಪಿಗೆ ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಪಂದ್ಯದ ಸಂಭಾವನೆಯಲ್ಲಿ ಪೂರ್ಣ ಪ್ರಮಾಣದ ಅಂದರೆ ಶೇಕಡ 100 ದಂಡ ವಿಧಿಸಲಾಗಿದೆ.

ಮೊಹಾಲಿಯಲ್ಲಿ ನಡೆದ ಪಂಜಾಬ್ ಹಾಗೂ ದೆಹಲಿ ನಡುವಿನ ಪಂದ್ಯ ವೇಳೆ ಅಂಪೈರ್ ನೀಡಿದ ತೀರ್ಪಿಗೆ ಗಲಾಟೆ ಮಾಡಿದ ಗಿಲ್, ಸುಮಾರು 10 ನಿಮಿಷ ಪಂದ್ಯ ಸ್ಥಗಿತಗೊಳ್ಳುವಂತೆ ಮಾಡಿದ್ದರು. ಸ್ಕ್ವೇರ್​ ಲೆಗ್ ಅಂಪೈರ್ ಜತೆ ರ್ಚಚಿಸಿದ ಬಳಿಕ ಅಂಪೈರ್ ತಮ್ಮ ತೀರ್ಪು ವಾಪಸ್ ಪಡೆದು ಗಿಲ್​ಗೆ ಆಡುವ ಅವಕಾಶ ನೀಡಿದ್ದರು.

ದೆಹಲಿ ತಂಡ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತಾದರೂ, ಮ್ಯಾಚ್ ರೆಫ್ರಿ ಪಿ. ರಂಗನಾಥನ್ ಮಧ್ಯಪ್ರವೇಶದಿಂದ ಪ್ರಕರಣ ಇತ್ಯರ್ಥವಾಗಿತ್ತು. ಗಿಲ್ ವರ್ತನೆ ದೇಶೀಯ ಕ್ರಿಕೆಟ್ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿತ್ತು. ಸ್ಪಿನ್ ದಿಗ್ಗಜ ಬಿಷನ್​ಸಿಂಗ್ ಬೇಡಿ ಬಹಿರಂಗವಾಗಿಯೇ ಗಿಲ್ ವಿರುದ್ಧ ಕಿಡಿಕಾರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net