ಜಮ್ಮು-ಕಾಶ್ಮೀರಕ್ಕೆ (Ranaji Final) ಶುಭಂ ಶತಕದ ಬಲ

ಶತಕ ಬಾರಿಸಿದ ಜಮ್ಮು-ಕಾಶ್ಮೀರ (Ranaji Final) ತಂಡದ ಶುಭಂ ಪುಂದಿರ
ಶತಕ ಬಾರಿಸಿದ ಜಮ್ಮು-ಕಾಶ್ಮೀರ (Ranaji Final) ತಂಡದ ಶುಭಂ ಪುಂದಿರ
Published on
ಹುಬ್ಬಳ್ಳಿ: ಆತಿಥೇಯ ಕರ್ನಾಟಕ ತಂಡದ (Ranaji Final) ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದ ಜಮ್ಮು-ಕಾಶ್ಮೀರ ತಂಡ ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಫೈನಲ್​ನಲ್ಲಿ ಮೊದಲ ದಿನದ ಗೌರವ ಸಂಪಾದಿಸಿದೆ. ಶುಭಂ ಪಂದಿರ ಅಜೇಯ ಶತಕ (117ರನ್, 221 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಯಾವರ್ ಹಸನ್ (88ರನ್, 150ಎಸೆತ, 13 ಬೌಂಡರಿ) ಮತ್ತು ಅಬ್ದುಲ್ ಸಮದ್ (52ರನ್ ಅ, 67ಎಸೆತ, 5ಬೌಂಡರಿ, 1ಸಿಕ್ಸರ್) ಅರ್ಧಶತಕಗಳ ನೆರವಿನಿಂದ ಪ್ರವಾಸಿಗರು ಬೃಹತ್ ಮೊತ್ತದತ್ತ ಚಿತ್ತ ನೆಟ್ಟಿದ್ದಾರೆ.
ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಮಂಗಳವಾರ ದಿನದಾಟದ ಅಂತ್ಯಕ್ಕೆ ಜಮ್ಮು ಕಾಶ್ಮೀರ 2 ವಿಕೆಟ್​ಗೆ 284 ರನ್ ಗಳಿಸುವ ಮೂಲಕ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದನ್ನು ಸಮರ್ಥಿಸಿಕೊಂಡಿತು.
ಎರಡು ಶತಕದ ಜೊತೆಯಾಟಗಳು ಪ್ರವಾಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದವು. 2ನೇ ವಿಕೆಟ್​ಗೆ ಹಸನ್ ಹಾಗೂ ಶುಭಂ 139ರನ್ ಸೇರಿಸಿದರು. ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಹಸನ್ 2ನೇ ಸ್ಲಿಪ್​ನಲ್ಲಿ ಕೆ.ಎಲ್. ರಾಹುಲ್​ಗೆ ಕ್ಯಾಚ್ ನೀಡುವ ಮೂಲಕ ಈ ಜೊತೆಯಾಟ ಬೇರ್ಪಟ್ಟಿತು. ಮುರಿಯದ 3ನೇ ವಿಕೆಟ್​ಗೆ ಶುಭಂ ಹಾಗೂ ಅಬ್ದುಲ್ ಸಮದ್ 105 ರನ್ ಸೇರಿಸಿದ್ದಾರೆ. ಈ ನಡುವೆ ಶಿಖರ ಶೆಟ್ಟಿ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿ 186 ಎಸೆತಗಳಲ್ಲಿ ಶುಭಂ ಶತಕ ಪೂರೈಸಿದರು. ಇದು ಶುಭಂಗೆ ರಣಜಿಯಲ್ಲಿ 4ನೇ ಶತಕವಾಗಿದೆ.
ಸಂಕ್ಷಿಪ್ತ ಸ್ಕೋರ್:
ಜಮ್ಮು - ಕಾಶ್ಮೀರ: 87 ಓವರ್​ಗಳಲ್ಲಿ 2 ವಿಕೆಟ್​ಗೆ 284ರನ್ (ಯಾವರ್ ಹಸನ್ 88, ಶುಭಂ ಪುಂದಿರ್ 117ಅ, ಅಬ್ದುಲ್ ಸಮದ್ 52ಅ, ಪ್ರಸಿದ್ಧ ಕೃಷ್ಣ 36ಕ್ಕೆ 2).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net