

ಹೈದರಾಬಾದ್: ಸತತ ಆರು ಪಂದ್ಯಗಳ ಸೋಲಿನಿಂದ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಆರ್‌ಜಿಐ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್-17ರ ತನ್ನ 9ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ದಾಖಲೆಯ ರನ್-ಸಿಕ್ಸರ್‌ಗಳ ಸುರಿಮಳೆ ಹರಿಸಿದ ಉಭಯ ತಂಡಗಳು ಈ ಬಾರಿ ಮರು ಮುಖಾಮುಖಿಯಾಗಲಿದ್ದು, ್ಾ ಡು ಪ್ಲೆಸಿಸ್ ಪಡೆಗೆ ಸೋಲಿನ ಸೇಡು ತೀರಿಸುವ ಅವಕಾಶ ಒದಗಿದೆ.
ಹಿಂದಿನ ಪಂದ್ಯದಲ್ಲಿ ಕೆಕೆಆರ್ ಎದುರು 1 ರನ್‌ನಿಂದ ವೀರೋಚಿತ ಸೋಲು ಕಂಡಿರುವ ಆರ್‌ಸಿಬಿ ತಂಡ ಮಾನಸಿಕವಾಗಿ ಕುಗ್ಗಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 1 ಗೆಲುವು, 7 ಸೋಲಿನೊಂದಿಗೆ ಕೇವಲ 2 ಅಂಕ ಕಲೆಹಾಕಿರುವುದು ಐಪಿಎಲ್ ಇತಿಹಾಸದಲ್ಲಿ ತಂಡದ ನೀರಸ ಪ್ರದರ್ಶನ ಎನಿಸಿದೆ. ಪ್ಲೇಆ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಆರ್‌ಸಿಬಿ ಉಳಿದ ಲೀಗ್ ಪಂದ್ಯಗಳಲ್ಲಿ ಗೆದ್ದು ಮಾನ ಉಳಿಸಿಕೊಳ್ಳಬೇಕಿದೆ. ಇತ್ತ ಸನ್‌ರೈಸರ್ಸ್ ಹಾಲಿ ಆವೃತ್ತಿಯಲ್ಲಿ 3 ಬಾರಿ 250 ಪ್ಲಸ್ ರನ್‌ಗಳಿಸುವ ಮೂಲಕ ಇತರ ತಂಡಗಳಿಗೆ ದುಃಸ್ವಪ್ನವಾಗಿದೆ. ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು, 2 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಸತತ 4 ಪಂದ್ಯಗಳಲ್ಲಿ ಜಯದ ಓಟ ಕಾಯ್ದುಕೊಂಡಿರುವ ಪ್ಯಾಟ್ ಕಮ್ಮಿನ್ಸ್ ಪಡೆ ಇನ್ನೊಂದು ಯಶಸ್ಸಿನೊಂದಿಗೆ ಪ್ಲೇಆ್ ರೇಸ್‌ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳುವ ತವಕದಲ್ಲಿದೆ.
ಬೌಲಿಂಗ್ ದೌರ್ಬಲ್ಯ
ಟೂರ್ನಿಯಲ್ಲಿ ಆರ್‌ಸಿಬಿ ವೈಲ್ಯಕ್ಕೆ ಪ್ರಮಖ ಕಾರಣ ಬೌಲಿಂಗ್ ವಿಭಾಗ. ಆರ್‌ಸಿಬಿ ಆಡಿರುವ ಹಿಂದಿನ ಐದು ಪಂದ್ಯಗಳಲ್ಲಿ ಕನಿಷ್ಠ 180 ಪ್ಲಸ್ ರನ್ ಬಿಟ್ಟುಕೊಟ್ಟಿದೆ. ಇದರಲ್ಲಿ ಎರಡು ಬಾರಿ 200ಕ್ಕೂ ಅಧಿಕ ರನ್ ಚಚ್ಚಿಸಿಕೊಂಡಿದೆ. ಬೌಲರ್‌ಗಳ ವೈಲ್ಯವನ್ನು ಬ್ಯಾಟರ್‌ಗಳು ಸರಿದೂಗಿಸಲು ಯತ್ನಿಸುತ್ತಿದ್ದಾರೆ. ಆದರೆ ಗೆಲುವಿನ ಕಾಂಬಿನೇಷನ್ ಆರ್‌ಸಿಬಿಗೆ ದೊರೆತಿಲ್ಲ. ವಿರಾಟ್ ಕೊಹ್ಲಿ ಟಾಪ್ ಸ್ಕೋರರ್ ಆಗಿದ್ದು, ಡುಪ್ಲೆಸಿಸ್ ಮಿಂಚಬೇಕಿದೆ. ವಿಲ್ ಜಾಕ್ಸ್, ರಜತ್ ಪಾಟೀದಾರ್ ಕೆಕೆಆರ್ ಎದುರು ಾರ್ಮ್ ಮರಳಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಕ್ಯಾಮರಾನ್ ಗ್ರೀನ್ ಒಂದು ಪಂದ್ಯದಲ್ಲಿಯೂ ಸಂಭಾವನೆಗೆ ತಕ್ಕ ಆಟ ಪ್ರದರ್ಶಿಸಿಲ್ಲ. ಲಾಕಿ ರ್ಗ್ಯುಸನ್, ಸಿರಾಜ್ ಮತ್ತೆ ದುಬಾರಿಯಾಗಿದ್ದಾರೆ. ಯಶ್ ದಯಾಳ್ ಇದುವರೆಗಿನ ಆರ್‌ಸಿಬಿ ತಂಡದ ಯಶಸ್ಸಿ ಬೌಲರ್ ಎನಿಸಿದ್ದು, ಟೂರ್ನಿಯ ಬೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಕಂಡುಕೊಳ್ಳಲು ಪರದಾಡುತ್ತಿರುವ ಆರ್‌ಸಿಬಿ ತಂಡ ಸರ್ವಾಂಗೀಣ ನಿರ್ವಹಣೆಯೊಂದಿಗೆ ಪುಟಿದೇಳುವ ಅನಿವಾರ‌್ಯವಿದೆ. ಸಿರಾಜ್‌ಗೆ ಹೈದರಾಬಾದ್ ತವರು ಅಂಗಣವಾಗಿದೆ.
ಬ್ಯಾಟಿಂಗ್ ಬಲ: ಪವರ್ ಪ್ಲೇಯಲ್ಲಿ ಬಿಗ್ ಹಿಟ್‌ಗಳೊಂದಿಗೆ ಭರ್ಜರಿ ಆರಂಭ ಒದಗಿಸುವ ಟ್ರಾವಿಸ್ ಹೆಡ್- ಅಭಿಷೇಕ್ ಶರ್ಮ ಜೋಡಿ ಎದುರು ಬೌಲರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ. 10 ದಿನಗಳ ಅಂತರದಲ್ಲಿ 2ನೇ ಬಾರಿಗೆ ಪರಸ್ಪರ ಎದುರಾಳಿಗಳಾಗಿದ್ದು, ಏ.15ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿ ಸನ್‌ರೈಸರ್ಸ್ 287 ರನ್ ಕಲೆಹಾಕಲು ನೆರವಾಗಿದ್ದರು. ಹೆನ್ರಿಕ್ ಕ್ಲಾಸೆನ್, ಏಡೆನ್ ಮಾರ್ಕ್ರಮ್, ನಿತೀಶ್ ಕುಮಾರ್ ರೆಡ್ಡಿ ಮಧ್ಯ ಕ್ರಮಾಂಕದ ಶಕ್ತಿಯಾಗಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಜತೆಗೆ ಭುವನೇಶ್ವರ್ ಕುಮಾರ್, ಟಿ. ನಟರಾಜನ್‌ಗೆ ಹೈದರಾಬಾದ್ ಪಿಚ್‌ನಲ್ಲಿ ಆಡಿರುವ ಅನುಭವ ನೆರವಾಗಲಿದೆ.
ಪವಾಡ ನಡೆದರೆ ಪ್ಲೇಆಫ್‌ಗೆ?
ಕಳೆದ ಪಂದ್ಯದ ಸೋಲಿನಿಂದ ಆರ್‌ಸಿಬಿ ಪಾಲಿಗೆ ಐಪಿಎಲ್-17 ಬಹುತೇಕ ‘ಮುಗಿದ ಅಧ್ಯಾಯ’ ಎನಿಸಿದ್ದರೂ, ಗಣಿತಶಾಸದ ಅನ್ವಯ ಇನ್ನೂ ಪ್ಲೇಆ್ ಅವಕಾಶವಿದೆ. ಅಂದರೆ ಉಳಿದ 6 ಪಂದ್ಯ ಜಯಿಸುವ ಮೂಲಕ ಪವಾಡಸದೃಶವಾಗಿ ಪ್ಲೇಆ್ಗೇರಬಹುದಾಗಿದೆ. ಆದರೆ ಈ ಲೆಕ್ಕಾಚಾರದಲ್ಲಿ ಉಳಿದ ಪಂದ್ಯಗಳ ಲಿತಾಂಶ ಮತ್ತು ರನ್‌ರೇಟ್ ಕೂಡ ವರದಾನವಾಗಬೇಕು. 2019ರಲ್ಲಿ ಸನ್‌ರೈಸರ್ಸ್ ಕೇವಲ 6 ಪಂದ್ಯ ಗೆದ್ದು, 12 ಅಂಕದೊಂದಿಗೆ ಅಗ್ರ 4ರಲ್ಲಿ ಸ್ಥಾನ ಗಳಿಸಿತ್ತು. ಆದರೆ ಆಗ ಎಂಟೇ ತಂಡಗಳಿದ್ದವು. ಹೀಗಾಗಿ ಆರ್‌ಸಿಬಿ ಸದ್ಯ ಕಾಗದದ ಮೇಲಿನ ಲೆಕ್ಕಾಚಾರವನ್ನು ಮೈದಾನದಲ್ಲೂ ಕಾರ್ಯಗತಗೊಳಿಸುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತಿದೆ.
1. ಸನ್‌ರೈಸರ್ಸ್ ತಂಡ ಹಾಲಿ ಟೂರ್ನಿಯಲ್ಲಿ ತವರಿನಲ್ಲಿ ಅಜೇಯವಾಗಿರುವ ಏಕೈಕ ತಂಡ ಎನಿಸಿದೆ.
ಮುಖಾಮುಖಿ: 24
ಆರ್‌ಸಿಬಿ: 10
ಸನರೈಸರ್ಸ್: 13
ರದ್ದು: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ