

ಕೃಷ್ಣ ಕುಲಕರ್ಣಿ ಕಲಬುರಗಿ: ಐದನೇ ಶ್ರೇಯಾಂಕಿತ ರಾಮ್‌ಕುಮಾರ್ ರಾಮನಾಥನ್ ಕಲಬುರಗಿ ಓಪನ್ ಐಟಿಎಫ್ ಪುರುಷರ ವರ್ಲ್ಡ್ ಟೂರ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸೆಮಿೈನಲ್‌ಗೇರಿದ್ದು, ಆತಿಥೇಯ ಭಾರತದ ಪ್ರಶಸ್ತಿ ಗೆಲುವಿನ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದಾರೆ.
ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಲಾನ್ ಟೆನಿಸ್ ಅಂಕಣದಲ್ಲಿ ಶುಕ್ರವಾರ ನಡೆದ ಕ್ವಾರ್ಟರ್‌ೈನಲ್‌ನಲ್ಲಿ ರಾಮ್‌ಕುಮಾರ್ 7-5, 6-0 ನೇರಸೆಟ್‌ಗಳಿಂದ ಮನೀಶ್ ಸುರೇಶ್‌ಕುಮಾರ್‌ಗೆ ಸೋಲುಣಿಸಿದರು. 6ನೇ ಶ್ರೇಯಾಂಕಿತ ರಿಷಭ್ ಅಗರ್ವಾಲ್ 6-0, 6-4ರಿಂದ ಜಪಾನ್‌ನ ರ‌್ಯುಕಿ ಮತ್ಸುಡಾ ಎದುರು ಪರಾಭವಗೊಂಡರು. ಯುಎಸ್ ಓಪನ್ ಜೂನಿಯರ್ ಕ್ವಾಲಿಫೈಯರ್ ಹಾಗೂ 18 ವರ್ಷದ ಎಡಗೈ ಆಟಗಾರ ಆರ್ಯನ್ ಶಾಹ 6-3, 6-2ರಿಂದ ಜಪಾನ್‌ನ ರ‌್ಯುಟೋರೋ ತಗುಚಿಗೆ ಮಣಿದು ನಿರಾಸೆ ಮೂಡಿಸಿದರು. 7ನೇ ಶ್ರೇಯಾಂಕಿತ ಆಸ್ಟ್ರೀಯಾದ ಡೇವಿಡ್ ಪಿಚ್‌ಲೇರ್ 6-2, 6-0ಯಿಂದ ಜಪಾನ್‌ನ ಸೀಟಾ ವಾತನಬೆಗೆ ಶಾಕ್ ನೀಡಿದರು.