

ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಐಪಿಎಲ್ ಮೊದಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಭಾಗವಾಗಿದ್ದಾರೆ. ತಂಡದ ಬದಲಿಸದ, ಒಮ್ಮೆಯೂ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಏಕೈಕ ಆಟಗಾರ ಎಂದರೆ ವಿರಾಟ್ ಕೊಹ್ಲಿ. ರಾಜಸ್ಥಾನ ರಾಯಲ್ಸ್ ತಂಡದ ಅಭಿಮಾನಿಯೊಬ್ಬ ಕೊಹ್ಲಿಗೆ ತಂಡದ ಜೆರ್ಸಿ ತೊಟ್ಟು, ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜಸ್ಥಾನ ರಾಯಲ್ಸ್, ಕೊಹ್ಲಿ ತಂಡಕ್ಕೆ ಬರುವುದಾದರೆ ಆರ್ಸಿಬಿಯ ಬ್ಯಾಕ್ರೂಂ ಸಿಬ್ಬಂದಿ ಮೀ.ನಾಗ್ಸ್ (ಡ್ಯಾನಿಸ್ ಸೇಠ್) ಬಂದರಷ್ಟೇ ಕೊಹ್ಲಿಗೆ ಆಹ್ವಾನ ನೀಡುವುದಾಗಿ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದೆ. ಐಪಿಎಲ್ನಲ್ಲಿ ಆಡುವವರೆಗೂ ಆರ್ಸಿಬಿ ತಂಡದಲ್ಲೇ ಉಳಿಯುವುದಾಗಿ ಹೇಳಿಕೊಂಡಿದ್ದಾರೆ.
ಆರ್ಸಿಬಿ ತಂಡದ ಸ್ಟಾರ್ ಆಟಗಾರನಾಗಿರುವ ಕೊಹ್ಲಿ, ಭಾರತ ಹಾಗೂ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಬ್ಯಾಟ್ಸ್ಮನ್. ಐಪಿಎಲ್ ಅತಿಹೆಚ್ಚು ರನ್ ಬಾರಿಸಿರುವ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಕೊಹ್ಲಿ ಹೆಚ್ಚು ಬೇಡಿಕೆ ಹೊಂದಿರುವ ಆಟಗಾರು. ಆರ್ಸಿಬಿ ತಂಡದ ಬ್ಯಾಕ್ರೂಂ ಸಿಬ್ಬಂದಿ ಮಿ.ನಾಗ್ಸ್, ತಂಡದೊಂದಿಗೆ ಹಲವು ತಮಾಷೆ ಕ್ಷಣಗಳನ್ನು ಕಳೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಆರ್ಸಿಬಿ ತಂಡದಷ್ಟೇ ಮಿ.ನಾಗ್ಸ್ ಪ್ರಸಿದ್ಧಿ ಪಡೆದಿದ್ದಾರೆ.
2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ಗೆ ಸನ್ನದ್ಧವಾಗುತ್ತಿದೆ. ನಾಯಕ ಸ್ಟೀವನ್ ಸ್ಮಿತ್ ತಂಡದ ಆರಂಭಿಕ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವಾಗಿದೆ. ಹಿಂದಿನ ಆವೃತ್ತಿಯಲ್ಲಿ ಕೆಲ ಪಂದ್ಯಗಳಿಗೆ ತಂಡ ಮುನ್ನಡೆಸಿದ್ದ ಅಜಿಂಕ್ಯ ರಹಾನೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ಗೆ ವರ್ಗವಾಗಿದ್ದಾರೆ. ಕೊಹ್ಲಿ ಸಾರಥ್ಯದ ಆರ್ಸಿಬಿ ಆಗಸ್ಟ್ ಕೊನೇ ವಾರದಲ್ಲಿ ಯುಎಇಯತ್ತ ಪ್ರಯಾಣ ಬೆಳೆಸಲಿದೆ.