ಕೆಕೆಆರ್​ಗೆ ಇಂದು ರಾಜಸ್ಥಾನ ಸವಾಲು; ಈಡನ್​ನಲ್ಲಿ ಹಾಲಿ ಚಾಂಪಿಯನ್ಸ್​ ಗೆದ್ದರೆ ಪ್ಲೇಆಫ್​ ಅವಕಾಶ ವೃದ್ಧಿ

web kkr
Published on

ಕೋಲ್ಕತ: ಹಿಂದಿನ ಪಂದ್ಯದ ಗೆಲುವಿನೊಂದಿಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಹಾಲಿ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ ತಂಡ ಐಪಿಎಲ್​ 18ನೇ ಆವೃತ್ತಿಯಲ್ಲಿ ಪ್ಲೇಆಫ್​​ಗೇರುವ ಆಸೆ ಜೀವಂತವಿರಿಸಿಕೊಂಡಿದೆ. ಭಾನುವಾರ ಈಡನ್​ ಗಾರ್ಡನ್​ನಲ್ಲಿ ರಾಜಸ್ಥಾನ ರಾಯಲ್ಸ್​ ಸವಾಲು ಎದುರಿಸಲಿದ್ದು, ಅಂಕಪಟ್ಟಿಯಲ್ಲಿ ಪ್ರಗತಿ ಕಾಣುವ ತವಕದಲ್ಲಿದೆ. ರಾಜಸ್ಥಾನಕ್ಕೆ ಔಪಚಾರಿಕ ಎನಿಸಿದರೂ, ಪ್ರತಿಷ್ಠೆಗಾಗಿ ಸೆಣಸಲಿದೆ.

ತವರಿನ ನೆಲದಲ್ಲಿ ಲಯ ಕಂಡುಕೊಂಡಿರುವ ಕೆಕೆಆರ್​ ಟೂರ್ನಿಯಲ್ಲಿ ತನ್ನ 4 ಲೀಗ್​ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ 17 ಅಂಕ ಕಲೆಹಾಕಲಿದೆ. ಜತೆಗೆ ಇತರ ಪಂದ್ಯಗಳ ಲಿತಾಂಶದ ಮೇಲೆ ಪ್ಲೇಆಫ್​​ ಸ್ಥಾನ ನಿರ್ಧರಿತವಾಗಲಿದೆ. ಆದರೆ 4ರಲ್ಲಿ 2 ಪಂದ್ಯಗಳನ್ನು ಕೋಲ್ಕತದಲ್ಲಿ ಆಡಲಿದೆ. ಇದುವರೆಗೆ ಅಡಿರುವ 10 ಪಂದ್ಯಗಳಲ್ಲಿ 4 ಜಯ, 5 ಸೋಲು ಮತ್ತು 1 ರದ್ದು ಸೇರಿ 9 ಅಂಕ ಹೊಂದಿದೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಎದುರಿನ ಗೆಲುವು ತಂಡದಲ್ಲಿ ಹೊಸ ಹುಮ್ಮಸ್ಸು ತುಂಬಿದೆ.

ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ಹೊಂದಿರುವ ರಾಜಸ್ಥಾನ ಎದುರು ಕೆಕೆಆರ್​ ೇವರಿಟ್​ ಎನಿಸಿದೆ. ಮುಂಬೈ ವಿರುದ್ಧ ಬರೋಬ್ಬರಿ 100 ರನ್​ಗಳಿಂದ ಮುಗ್ಗರಿಸಿದ ರಾಜಸ್ಥಾನ ರಾಯಲ್ಸ್​, ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8 ಸೋಲು ಕಂಡಿದೆ. ರಾಜಸ್ಥಾನ ಒತ್ತಡ ರಹಿತವಾಗಿ ಆಡುವುದರಿಂದ ಇತರ ತಂಡಗಳು ಪ್ಲೇಆ್​ಗೇರುವ ಅವಕಾಶಕ್ಕೆ ತಡೆಯಾದರೂ ಅಚ್ಚರಿ ಇಲ್ಲ. ಕಾಯಂ ನಾಯಕ ಸಂಜು ಸ್ಯಾಮ್ಸನ್​ ಕಣಕ್ಕಿಳಿಯುವುದು ಖಾತ್ರಿಗೊಂಡಿಲ್ಲ. ರಿಯಾನ್​ ಪರಾಗ್​ ಹಂಗಾಮಿಯಾಗಿ ತಂಡ ಮುನ್ನಡೆಸುವ ಸಾಧ್ಯತೆಗಳಿವೆ. ಜತೆಗೆ ವೇಗಿ ಸಂದೀಪ್​ ಶರ್ಮ ಸಹ ಗಾಯದ ಸಮಸ್ಯೆಯಿಂದ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದು, ರಾಜಸ್ಥಾನಕ್ಕೆ ಮತ್ತಷ್ಟು ಪೆಟ್ಟು ನೀಡಿದೆ. ಮೆಗಾ ಹರಾಜಿಗೂ ಮುನ್ನ ರಿಟೇನ್​ ಆದ ಧ್ರುವ ಜುರೆಲ್​, ಶಿಮ್ರೊನ್​ ಹೆಟ್ಮೆಯರ್​ ವೈಲ್ಯ ತಂಡಕ್ಕೆ ಮುಳುವಾಗಿದೆ. ರಾಜಸ್ಥಾನ ತಂಡ ಕೈಬಿಟ್ಟ ಆಟಗಾರರಾದ ಯಜುವೇಂದ್ರ ಚಾಹಲ್​, ಜೋಸ್​ ಬಟ್ಲರ್​, ಪ್ರಸಿದ್ಧ ಕೃಷ್ಣ ಟೂರ್ನಿಯಲ್ಲಿ ಆರೆಂಜ್​ ಹಾಗೂ ಪರ್ಪಲ್​ ಕ್ಯಾಪ್​ ರೇಸ್​ನಲ್ಲಿದ್ದಾರೆ.

ಮುಖಾಮುಖಿ: 31

ರಾಜಸ್ಥಾನ: 14

ಕೆಕೆಆರ್​: 15

ರದ್ದು: 2

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ತವರಿನ ಅಂಗಣವೇ ಚಾಲೆಂಜ್​!

ಕೆಕೆಅರ್​ ತಂಡದ ಭದ್ರಕೋಟೆ ಎನಿಸಿದ್ದ ಈಡನ್​ ಗಾರ್ಡನ್​ನಲ್ಲಿ ಈ ಬಾರಿ ನಿರೀತ ಯಶಸ್ಸು ದೊರೆತಿಲ್ಲ. ಇದುವರೆಗೆ ಮನೆ ಅಂಗಣದಲ್ಲಿ ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಿರುವ 4 ಲೀಗ್​ ಪಂದ್ಯಗಳಲ್ಲಿ 2 ಕೋಲ್ಕತದಲ್ಲಿ ಆಡುವುದು ಕೆಕೆಆರ್​ಗೆ ಸವಾಲಿನಿಂದ ಕೂಡಿದೆ. ರಾಜಸ್ಥಾನ ಬಳಿಕ ಮೇ 7ರಂದು ಸಿಎಸ್​ಕೆ ಎದುರು ಆಡಲಿದೆ. ನಂತರ ತವರಿನಾಚೆ ಸನ್​ರೈಸರ್ಸ್​ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಆರ್​ಸಿಬಿ ಎದುರು ಮೇ 17ರಂದು ಬೆಂಗಳೂರಿನಲ್ಲಿ ಆಡಲಿದೆ. ಕ್ವಿಂಟನ್​ ಡಿಕಾಕ್​, ರಹಮಾನುಲ್ಲ ಗುರ್ಬಜ್​ ಆರಂಭಿಕರಾಗಿ ಫಿಲ್​ ಸಾಲ್ಟ್​ ಸ್ಥಾನ ತುಂಬವಲ್ಲಿ ವಿಲರಾಗಿದ್ದಾರೆ. 23.75 ಕೋಟಿ ರೂ. ಪಡೆದಿರುವ ವೆಂಕಟೇಶ್​ ಅಯ್ಯರ್​ 10 ಇನಿಂಗ್ಸ್​ಗಳಲ್ಲಿ 142 ರನ್​ ಮಾತ್ರ ಕಲೆಹಾಕಿದ್ದಾರೆ. ನಾಯಕ ಅಜಿಂಕ್ಯ ರಹಾನೆ, ಅಂಗಕ್ರಿಶ್​ ರುವಂಶಿ ಮೇಲೆ ಬ್ಯಾಟಿಂಗ್​ ಅವಲಂಬಿತವಾಗಿದೆ. ಹಿಂದಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ರಹಾನೆ ಸಂಪೂರ್ಣವಾಗಿ ಫಿಟ್​ ಆಗಿ ಮರಳುವ ನಿರೀೆ ಇದೆ. ಸುನೀಲ್​ ನಾರಾಯಣ್​ ಕೆಕೆಆರ್​ನ ಟ್ರಂಪ್​ ಕಾರ್ಡ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net