ಕ್ವಾಲಿಫೈಯರ್​-2 ಪಂದ್ಯಕ್ಕೆ ಮಳೆ ಅಡ್ಡಿ! ಬದಲಾಗಲಿದೆಯೇ ಲೆಕ್ಕಾಚಾರ? | PBKS vs MI Qualifier 2

ವಿಜಯವಾಣಿ - 2025-06-01T193529.611
Published on

PBKS vs MI Qualifier 2: ಇಂದು (ಜೂ.01) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ವಾಲಿಫೈಯರ್​-2 ಪಂದ್ಯ ಆರಂಭಕ್ಕೆ ಇದೀಗ ಮಳೆ ಅಡ್ಡಿಯಾಗಿದೆ.

ಕ್ವಾಲಿಫೈಯರ್​-1ರಲ್ಲಿ ಆರ್​ಸಿಬಿ ಎದುರು ಮಂಡಿಯೂರಿದ ಪಂಜಾಬ್ ಕಿಂಗ್ಸ್​ ಇದೀಗ ಕ್ವಾಲಿಫೈಯರ್​-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದು ಬೀಗಲು ಎದುರುನೋಡುತ್ತಿದೆ. ಮತ್ತೊಂದೆಡೆ ಮುಂಬೈ ಕೂಡ ಇದೇ ರೀತಿ ಯೋಚಿಸಿದ್ದು, ಪಂಜಾಬ್​ ಕಿಂಗ್ಸ್​ ಮಣಿಸಿ ಫೈನಲ್​ ಎಂಟ್ರಿ ಕೊಡುವ ತವಕದಲ್ಲಿದೆ.

ಮಳೆಯಿಂದ ಪಂದ್ಯ ರದ್ದು?

ಇನ್ನೂ ಆರಂಭಗೊಳ್ಳದ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದೇ ಆದರೆ, ಪಂದ್ಯ ನಾಳೆಗೆ ಮುಂದೂಡಿಕೆ ಆಗುವುದಿಲ್ಲ.  ಮಳೆಯಿಂದ ಕ್ವಾಲಿಫೈಯರ್​-2 ರದ್ದಾದರೆ, ಅಂಕಪಟ್ಟಿಯಲ್ಲಿ ಹೆಚ್ಚು ಸ್ಥಾನ ಪಡೆದ ತಂಡವು ಫೈನಲ್‌ಗೆ ನೇರವಾಗಿ ಲಗ್ಗೆಯಿಡಲಿದೆ. ಇದು ಐಪಿಎಲ್​ನ ಮೂಲ ನಿಯಮಗಳಲ್ಲಿ ಒಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net