ರಾಜ್ಯ 16 ವಯೋಮಿತಿ ತಂಡಕ್ಕೆ ರಾಹುಲ್​ ದ್ರಾವಿಡ್​ ಕಿರಿಯ ಪುತ್ರ ಅನ್ವಯ್​ ಆಯ್ಕೆ

web dravid
Published on

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್​ ರಾಹುಲ್​ ದ್ರಾವಿಡ್​ ಕಿರಿಯ ಪುತ್ರ ಅನ್ವಯ್​ ದ್ರಾವಿಡ್​ ಡಿಸೆಂಬರ್​ 6ರಿಂದ ನಡೆಯಲಿರುವ ವಿಜಯ್​ ಮರ್ಚೆಂಟ್​ ಟ್ರೋಫಿ 16 ವಯೋಮಿತಿ ಕ್ರಿಕೆಟ್​ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ಶನಿವಾರ ಪ್ರಕಟಿಸಿರುವ 35 ಆಟಗಾರರ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಕೆಟ್​ ಕೀಪರ್-ಬ್ಯಾಟರ್​ ಆಗಿರುವ ಅನ್ವಯ್​, ಇತ್ತೀಚೆಗೆ ನಡೆದ 16 ವಯೋಮಿತಿ ಅಂತರ ವಲಯ ಟೂರ್ನಿಯಲ್ಲಿ ಬೆಂಗಳೂರು ವಲಯ ಪರ ತುಮಕೂರು ವಲಯದ ವಿರುದ್ಧ ಅಜೇಯ 200 ರನ್​ ಬಾರಿಸಿದ ಆಧಾರದಲ್ಲಿ ಸ್ಥಾನ ಪಡೆದಿದ್ದಾರೆ. ದ್ರಾವಿಡ್​ ಹಿರಿಯ ಪುತ್ರ ಸಮಿತ್​ ದ್ರಾವಿಡ್​ ಪ್ರಸಕ್ತ ಕರ್ನಾಟಕ ಪರ ಕೂಚ್​ ಬೆಹಾರ್​ ಟ್ರೋಫಿ 19 ವಯೋಮಿತಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net