ದ್ರಾವಿಡ್ ಪುತ್ರ ಸಮಿತ್ ದ್ವಿಶತಕದಾಟ

Dravid
Published on

ಬೆಂಗಳೂರು: ದಿಗ್ಗಜ ಬ್ಯಾಟ್ಸ್​ಮನ್ ಹಾಗೂ ಎನ್​ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ (204 ರನ್, 146 ಎಸೆತ, 33 ಬೌಂಡರಿ, 11ಕ್ಕೆ 2 ವಿಕೆಟ್) ಆಲ್ರೌಂಡ್ ನಿರ್ವಹಣೆ ಫಲವಾಗಿ ಮಲ್ಯ ಅಧಿತಿ ಅಂತಾರಾಷ್ಟ್ರೀಯ ಶಾಲಾ ತಂಡ 14 ವಯೋಮಿತಿಯ ಬಿಟಿಆರ್ ಶೀಲ್ಡ್ ಮೊದಲ ಗುಂಪಿನ 2ನೇ ಡಿವಿಜನ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 267 ರನ್​ಗಳಿಂದ ಶ್ರೀ ಕುಮಾರನ್ ಚಿಲ್ಡ ›ನ್ಸ್ ಅಕಾಡೆಮಿ ವಿರುದ್ಧ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮಲ್ಯ ಅಧಿತಿ ಶಾಲಾ ತಂಡ 50 ಓವರ್​ಗಳಲ್ಲಿ 3 ವಿಕೆಟ್​ಗೆ 377 ರನ್​ಗಳಿಸಿದರೆ, ಪ್ರತಿಯಾಗಿ ಶ್ರೀ ಕುಮಾರನ್ ಚಿಲ್ಡ್​ರನ್ಸ್ ಅಕಾಡೆಮಿ ತಂಡ 32.1 ಓವರ್​ಗಳಲ್ಲಿ 110 ರನ್​ಗಳಿಗೆ ಸರ್ವಪತನ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net