ಕರ್ನಾಟಕ ಕಿರಿಯರ ತಂಡಕ್ಕೆ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ಉಪನಾಯಕ!

web sumit
Published on

ಬೆಂಗಳೂರು: ಮುಂಬರುವ ಕೂಚ್​ ಬೆಹಾರ್​ ಟ್ರೋಫಿ 19 ವಯೋಮಿತಿಯ ದೇಶೀಯ ಕ್ರಿಕೆಟ್​ ಟೂರ್ನಿಯ ಮೊದಲ 2 ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್​ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದ ಧೀರಜ್​ ಜೆ. ಗೌಡ ನಾಯಕರಾಗಿ ಮುಂದುವರಿದಿದ್ದಾರೆ.

ಕರ್ನಾಟಕ ತಂಡ ನವೆಂಬರ್​ 6ರಿಂದ 9ರವರೆಗೆ ಮೊದಲ ಪಂದ್ಯದಲ್ಲಿ ಬರೋಡ ಮತ್ತು ನವೆಂಬರ್​ 13ರಿಂದ 16ರವರೆಗೆ ತನ್ನ 2ನೇ ಪಂದ್ಯದಲ್ಲಿ ದೆಹಲಿ ವಿರುದ್ಧ ಆಡಲಿದೆ. ಇತ್ತೀಚೆಗೆ ಭಾರತದ 19 ವಯೋಮಿತಿ ತಂಡದಲ್ಲಿ ಸ್ಥಾನ ಪಡೆದರೂ, ಫಿಟ್ನೆಸ್​ ಸಮಸ್ಯೆಯಿಂದಾಗಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಸಮಿತ್​ ಈಗ ಫಿಟ್​ ಆಗಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ರಾಜ್ಯ ಕಿರಿಯರ ತಂಡ: ಧೀರಜ್​ ಜೆ. ಗೌಡ (ನಾಯಕ), ಸಮಿತ್​ ದ್ರಾವಿಡ್​ (ಉಪನಾಯಕ), ಶಿವಂ ಸಿಂಗ್​, ಪ್ರಣವ್​ ಬಾಬು, ರವಿ ಕೈರವ್​ ರೆಡ್ಡಿ (ವಿ.ಕೀ), ಕೆಪಿ ಕಾರ್ತಿಕೇಯ, ಸಿದ್ಧಾರ್ಥ್​ ಅಖಿಲ್​, ಸಮರ್ಥ್​ ನಾಗರಾಜ್​, ವೈಭವ್​ ಶರ್ಮ, ಪ್ರಥಮ್​ ಆರ್​, ರಾಗ್​ ಪೂಂಜ, ಗೌರವ್​ ಶಾನ್​ಭಾಗ್​, ಸೀನ್​ ಪ್ರತ್ಯುಷ್​ ಸಿರಿಲ್​ (ವಿ.ಕೀ), ಸನ್ಮಯ್​ ರುದ್ರ ಆದಿ, ರೋನಿತ್​ ಅಯ್ಯಂಗಾರ್​; ಕೋಚ್​: ಕೆಬಿ ಪವನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net