

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಮೈಸೂರು ವಾರಿಯರ್ಸ್ ಪರ ಮಹಾರಾಜ ಟ್ರೋಫಿಗೆ ಪದಾರ್ಪಣೆ ಮಾಡಿ ಆಡಿದ ಮೊದಲ 2 ಪಂದ್ಯಗಳಲ್ಲಿ ತಲಾ 7 ರನ್ ಗಳಿಸಿ ನಿರಾಸೆ ಮೂಡಿಸಿದರು. ಈ ನಡುವೆ ಶುಕ್ರವಾರ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ನವೀನ್ ಎಂಜಿ ಎಸೆತದಲ್ಲಿ 18 ವರ್ಷದ ಸಮಿತ್ ಡೀಪ್ ಮಿಡ್ವಿಕೆಟ್ನತ್ತ ಸಿಡಿಸಿರುವ ಭರ್ಜರಿ ಸಿಕ್ಸರ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಿತ್ ಸಿಕ್ಸರ್ ಸಿಡಿಸಿದ ಆಕರ್ಷಕ ಹೊಡೆತಕ್ಕೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.