ವಿನೂ ಮಂಕಡ್ ಟ್ರೋಫಿ ಕರ್ನಾಟಕ ರಾಜ್ಯ ತಂಡದಲ್ಲಿ ಟೀಮ್ ಇಂಡಿಯಾ ಕೋಚ್ ಪುತ್ರ

New-Project-32-1
Published on

ಬೆಂಗಳೂರು: ಟೀಮ್ ಇಂಡಿಯಾ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ ಮುಂಬರುವ ದೇಶೀಯ ಏಕದಿನ ಟೂರ್ನಿ 19 ವಯೋಮಿತಿಯ ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ರಾಜ್ಯದ 15 ಆಟಗಾರರ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಧೀರಜ್ ಜೆ ಗೌಡ ತಂಡವನ್ನು ಮುನ್ನಡೆಸಲಿದ್ದು, ಧ್ರುವ್ ಪ್ರಭಾಕರ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕ್ಟೋಬರ್ 12 ರಿಂದ ಟೂರ್ನಿ ಆರಂಭವಾಗಲಿದೆ.

ರಾಜ್ಯ ತಂಡ: ಧೀರಜ್ ಜೆ ಗೌಡ (ನಾಯಕ),ಧುವ್ ಪ್ರಭಾಕರ್ (ಉಪನಾಯಕ), ಸಮಿತ್ ದ್ರಾವಿಡ್, ಕಾರ್ತಿಕ್ ಎಸ್‌ಯು, ಶಿವಂ ಸಿಂಗ್, ಕಾರ್ತಿಕ್ ಎಸ್‌ಯು, ಹರ್ಷಿಲ್ ಧರ್ಮನಿ, ಯುವರಾಜ್ ಅರೋರಾ (ವಿ.ಕೀ), ಹಾರ್ದಿಕ್ ರಾಜ್, ಆರವ್ ಮಹೇಶ್, ಆದಿತ್ಯ ನಾಯರ್, ಧನುಷ್ ಗೌಡ, ಶಿಖರ್ ಶೆಟ್ಟಿ, ಸಮರ್ಥ ನಾಗರಾಜ್, ನಿಶ್ಚಿತ್ ಎನ್ ಪೈ, ಕಾರ್ತಿಕೇಯ ಕೆ.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net