ಕಿರಿಯರ ಕ್ರಿಕೆಟ್​ನಲ್ಲಿ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ಆಲ್ರೌಂಡ್​ ಆಟ

dravid son web
Published on

ಬೆಂಗಳೂರು: ದಿಗ್ಗಜ ಬ್ಯಾಟರ್​ ಹಾಗೂ ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರ ಹಿರಿಯ ಪುತ್ರ ಸಮಿತ್​ ದ್ರಾವಿಡ್​ 19 ವಯೋಮಿತಿಯ ಕೂಚ್​ ಬಿಹಾರ್​ ಟ್ರೋಫಿ ಕ್ರಿಕೆಟ್​ ಟೂರ್ನಿಯಲ್ಲಿ ಆಲ್ರೌಂಡ್​ ನಿರ್ವಹಣೆ ತೋರುವ ಮೂಲಕ ಗಮನಸೆಳೆದಿದ್ದಾರೆ.

ಆತಿಥೇಯ ಜಮ್ಮು&ಕಾಶ್ಮೀರ ವಿರುದ್ಧ ಜಮ್ಮುವಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲಿಗೆ 2 ವಿಕೆಟ್​ ವಿಕೆಟ್​ ಕಬಳಿಸಿದ ಸಮಿತ್​ ನಂತರ 98 ರನ್​ (159 ಎಸೆತ, 13 ಬೌಂಡರಿ, 1 ಸಿಕ್ಸರ್​) ಬಾರಿಸಿದರು.

ಸಮಿತ್​ ಕೇವಲ 2 ರನ್​ನಿಂದ ಶತಕವಂಚಿತರಾದರೆ, ಮತ್ತೋರ್ವ ಬ್ಯಾಟರ್​ ಕಾರ್ತಿಕೇಯ ಕೆಪಿ 163 ರನ್​ ಸಿಡಿಸಿದರು. ಇದರಿಂದ ಕಾಶ್ಮೀರದ 170 ರನ್​ಗಳಿಗೆ ಪ್ರತಿಯಾಗಿ ಕರ್ನಾಟಕ 2ನೇ ದಿನದಂತ್ಯಕ್ಕೆ 5 ವಿಕೆಟ್​ಗೆ 389 ರನ್​ ಸೇರಿಸಿ ಇನಿಂಗ್ಸ್​ ಮುನ್ನಡೆ ಸಾಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net