ಕ್ರಿಕೆಟಿಗನಾಗದಿದ್ದರೆ ರಾಹುಲ್ ದ್ರಾವಿಡ್​ ಏನು ಆಗಲು ಬಯಸಿದ್ದರು..?

RAHUL DRAVID FOR WEB
Published on

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ರಾಹುಲ್​ ದ್ರಾವಿಡ್​, ಉತ್ತಮ ಕ್ರಿಕೆಟಿಗ ಎನಿಸಿಕೊಳ್ಳುವುದರ ಹಿಂದೆ ಅವರ ಸಾಕಷ್ಟು ಶ್ರಮವಿದೆ. ಭಾರತೀಯ ಕ್ರಿಕೆಟ್​ನಲ್ಲಿ ದಿ ವಾಲ್​ ಎಂದೇ ಕರೆಸಿಕೊಂಡ ದ್ರಾವಿಡ್​ಗೆ ಶಾಲಾ ದಿನಗಳಲ್ಲಿ ಕ್ರಿಕೆಟ್​ ಆಯ್ಕೆ ಅಷ್ಟು ಸುಲಭವಾಗಿರಲಿಲ್ಲ. ಸ್ವತಃ ರಾಹುಲ್​ ದ್ರಾವಿಡ್​ ಹೇಳಿಕೊಂಡಿರುವಂತೆ ಭಾರತದಲ್ಲಿ ಕ್ರಿಕೆಟಿಗನಾಗಿ ಬೆಳೆಯುವುದು ಅಷ್ಟು ಸುಲಭವಲ್ಲ. ಛಲ ಬಿಡದೆ ಕ್ರಿಕೆಟ್​ ಆಯ್ದುಕೊಂಡ ದ್ರಾವಿಡ್​, ಸಿಎ ಅಥವಾ ಎಂಬಿಎ ಮಾಡುವ ಅವಕಾಶವನ್ನೇ ತ್ಯಜಿಸಿದರಂತೆ.

ಇಂದಿನ ಕ್ರಿಕೆಟಿಗರಿಗೆ ಕೆಪಿಎಲ್​, ಐಪಿಎಲ್​, ದೇಶೀಯ ಕ್ರಿಕೆಟ್​ ಟೂನಿರ್ಗಳಿವೆ, ರಣಜಿ ಅಲ್ಲದೆ, ವಿವಿಧ ಮಾದರಿಯ ಟೂರ್ನಿಗಳಿವೆ. ಆದರೆ, 90ರ ದಶಕದ ಕ್ರಿಕೆಟಿಗರಿಗೆ ಕೇವಲ ರಣಜಿ ಮಾತ್ರ ಹಣಕಾಸಿನ ಮೂಲವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಕ್ರಿಕೆಟ್​ ಆಯ್ದುಕೊಳ್ಳುವುದು ಸುಲಭದ ಮಾತಲ್ಲ. ದಿಗ್ಗಜ ರಾಹುಲ್​ ದ್ರಾವಿಡ್​ ಹೇಳಿಕೊಂಡಿರುವಂತೆ, ರಣಜಿ ಒಂದೇ ಆಟಗಾರರಿಗೆ ಹಣಕಾಸಿನ ಮೂಲವಾಗಿತ್ತು. ನನಗೆ ಸಿಎ ಅಥವಾ ಎಂಬಿಎ ಮಾಡುವ ಕನಸಿತ್ತು. ಆದರೆ, ಕ್ರಿಕೆಟ್​ ಆಯ್ದುಕೊಂಡಿದ್ದರಿಂದ ಈ ಪದವಿಗಳನ್ನು ತ್ಯಜಿಸಿದೆ ಎಂದಿದ್ದಾರೆ. 1996ರಲ್ಲಿ ರಾಷ್ಟ್ರೀಯ ತಂಡಕ್ಕೆ ಟೆಸ್ಟ್​ ಕ್ರಿಕೆಟ್​ ಮೂಲಕ ಎಂಟ್ರಿ ಕೊಟ್ಟ ರಾಹುಲ್​ ದ್ರಾವಿಡ್​, ಉತ್ತಮ ಸ್ಟ್ರೈಕ್ ರೇಟ್​ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಏಕದಿನ ತಂಡದಿಂದ ಹೊರಬಿದ್ದಿದ್ದರು. ಬಳಿಕ ಸತತ ಶ್ರಮದಿಂದಾಗಿ ಏಕದಿನ ತಂಡಕ್ಕೆ ವಾಪಸಾದೆ ಎಂದು ಹೇಳುತ್ತಾರೆ ದ್ರಾವಿಡ್​.

1999ರ ಏಕದಿನ ವಿಶ್ವಕಪ್​ ಟೂನಿರ್ಯಲ್ಲಿ ಗಮನಾರ್ಹ ನಿರ್ವಹಣೆ ತೋರಿದರು. 461 ರನ್​ ಗಳಿಸಿ ಟೂನಿರ್ಯಲ್ಲಿ ಅತಿಹೆಚ್ಚು ರನ್​ ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು. 2003ರ ಏಕದಿನ ವಿಶ್ವಕಪ್​ನಲ್ಲಿ ಆಡಿದ ದ್ರಾವಿಡ್​, ಜತೆಗೆ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸಿದ್ದರು. 2007ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಮುನ್ನಡೆಸಿದ್ದರು. 344 ಏಕದಿನ ಪಂದ್ಯಗಳಿಂದ 12 ಶತಕ, 83 ಅರ್ಧಶತಕ ಸೇರಿದಂತೆ 10889 ರನ್​ ಕಲೆಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net