ಅಜಿಂಕ್ಯ ರಹಾನೆ ಟೆಸ್ಟ್ ಉಪನಾಯಕತ್ವ, ಸ್ಥಾನಕ್ಕೆ ಕಂಟಕ?

rahane web
Published on

ನವದೆಹಲಿ: ರನ್‌ಬರ ಎದುರಿಸುತ್ತಿರುವ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡ ಉಪನಾಯಕತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಜತೆಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಪಡೆಯುವುದು ಕೂಡ ಅನುಮಾನವೆನಿಸಿದೆ.

ನ್ಯೂಜಿಲೆಂಡ್ ವಿರುದ್ಧ ಕಾನ್ಪುರ ಟೆಸ್ಟ್‌ನಲ್ಲಿ ಹಂಗಾಮಿ ನಾಯಕರಾಗಿದ್ದ ರಹಾನೆ, ಬಳಿಕ ಗಾಯದಿಂದಾಗಿ ಮುಂಬೈ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು. ಮತ್ತೋರ್ವ ಅನುಭವಿ ಆಟಗಾರ ಹಾಗೂ 100ಕ್ಕೂ ಅಧಿಕ ಟೆಸ್ಟ್ ಆಡಿರುವ ವೇಗಿ ಇಶಾಂತ್ ಶರ್ಮ ಕೂಡ ಕೊಕ್ ಪಡೆಯುವ ಭೀತಿಯಲ್ಲಿದ್ದಾರೆ. ರಹಾನೆ ಬದಲು ರೋಹಿತ್ ಶರ್ಮಗೆ ಟೆಸ್ಟ್ ತಂಡದ ಉಪನಾಯಕತ್ವ ಒಲಿಯುವ ನಿರೀಕ್ಷೆ ಇದೆ.

ದ. ಆಫ್ರಿಕಾ ಪ್ರವಾಸಕ್ಕೆ ದೊಡ್ಡ ತಂಡದೊಂದಿಗೆ ತೆರಳಲಿರುವ ಕಾರಣ ರಹಾನೆ ಸ್ಥಾನ ಕಾಯ್ದುಕೊಂಡರೂ, ಆಡುವ 11ರ ಬಳಗದಲ್ಲಿ ಸ್ಥಾನ ಅನುಮಾನವೆನಿಸಿದೆ. ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಏಕದಿನ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net