ಆಸೀಸ್ ಎದುರು ಭರ್ಜರಿ ಶತಕ ಸಿಡಿಸಿ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ

New-Project-21-1
Published on

ಧರ್ಮಶಾಲಾ: ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಸರ್ವಾಧಿಕ ರನ್ ಸುರಿಮಳೆ ಕಂಡ ಪಂದ್ಯದಲ್ಲಿ ಹಾಲಿ ರನ್ನರ್‌ಅಪ್ ನ್ಯೂಜಿಲೆಂಡ್ ತಂಡ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು 5 ರನ್‌ಗಳಿಂದ ವೀರೋಚಿತ ಸೋಲು ಅನುಭವಿಸಿದೆ. ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (116 ರನ್, 89 ಎಸೆತ, 9 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕ ಹಾಗೂ ಕೊನೆಯಲ್ಲಿ ಆಲ್ರೌಂಡರ್ ಜೇಮ್ಸ್ ನೀಶಾಮ್ (58 ರನ್, 39 ಎಸೆತ, 3 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಹೋರಾಟದ ನಡುವೆಯೂ ಕಿವೀಸ್ ತಂಡ ಟೂರ್ನಿಯಲ್ಲಿ ಸತತ 2ನೇ ಸೋಲು ಕಂಡರೆ, ಪ್ಯಾಟ್ ಕಮ್ಮಿನ್ಸ್ ಪಡೆ ಸತತ 4ನೇ ಜಯದೊಂದಿಗೆ ಸೆಮೀಸ್ ಅವಕಾಶ ವೃದ್ಧಿಸಿಕೊಂಡಿದೆ.

ಆಸ್ಟ್ರೇಲಿಯಾ- ನ್ಯೂಜಿಲೆಂಡ್ ನಡುವಿನ ಪಂದ್ಯದ ಕೆಲ ಮೈಲಿಗಲ್ಲುಗಳು ಕೆಳಗಿನಂತಿವೆ

24: ಏಕದಿನ ವಿಶ್ವಕಪ್‌ನಲ್ಲಿ 25 ವರ್ಷ ಪೂರೈಸುವ ಮುನ್ನವೇ 2 ಶತಕ ಬಾರಿಸಿದ 2ನೇ ಬ್ಯಾಟರ್ ರಚಿನ್ ರವೀಂದ್ರ (23 ವರ್ಷ, 244 ದಿನ). ಸಚಿನ್ ತೆಂಡುಲ್ಕರ್ (22 ವರ್ಷ, 313 ದಿನ) ಮೊದಲಿಗರು.

773: ಏಕದಿನ ವಿಶ್ವಕಪ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ರನ್ ಇದಾಗಿದೆ. ಹಾಲಿ ವಿಶ್ವಕಪ್‌ನಲ್ಲಿ ದ.ಆಫ್ರಿಕಾ -ಶ್ರೀಲಂಕಾ ನಡುವೆ 754 ರನ್ ಸಿಡಿದಿದ್ದು ಹಿಂದಿನ ದಾಖಲೆ.

32: ಏಕದಿನ ವಿಶ್ವಕಪ್‌ನಲ್ಲಿ 2ನೇ ಗರಿಷ್ಠ ಸಿಕ್ಸರ್ ಸಿಡಿದ ಪಂದ್ಯ ಇದಾಗಿದೆ. 2019ರಲ್ಲಿ ಇಂಗ್ಲೆಂಡ್- ಅ್ಘಾನಿಸ್ತಾನ ಪಂದ್ಯದಲ್ಲಿ 33 ಸಿಕ್ಸರ್ ಸಿಡಿದಿದ್ದು ದಾಖಲೆ ಎನಿಸಿದೆ.

1. ಆಸ್ಟ್ರೇಲಿಯಾ ತಂಡ (118) ಏಕದಿನ ವಿಶ್ವಕಪ್‌ನ ಪವರ್ ಪ್ಲೇಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ನ್ಯೂಜಿಲೆಂಡ್ (116) ದಾಖಲೆಯನ್ನು ಹಿಂದಿಕ್ಕಿತು. 2015ರಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್ ಈ ಸಾಧನೆ ಮಾಡಿತು. ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾ 133 ರನ್‌ಗಳಿಸಿರುವುದು ಗರಿಷ್ಠ.

1. ಏಕದಿನ ಕ್ರಿಕೆಟ್‌ನಲ್ಲಿ ಸತತ 3 ಬಾರಿ 350 ಪ್ಲಸ್ ರನ್‌ಗಳಿಸಿದ ಮೊದಲ ತಂಡ ಆಸ್ಟ್ರೇಲಿಯಾ.

20: ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ 2ನೇ ತಂಡ ಎನಿಸಿತು. ಆ್ಘನ್ ಎದುರು ಇಂಗ್ಲೆಂಡ್ 25 ಸಿಕ್ಸರ್ ಸಿಡಿಸಿರುವುದು ಗರಿಷ್ಠವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net