

ಅಹಮದಾಬಾದ್: ಐಸಿಸಿ ಪುರುಷರ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡವು 9 ವಿಕೆಟ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಜೋ ರೂಟ್ (77 ರನ್, 86 ಎಸೆತ, 4 ಬೌಂಡರಿ, 1 ಸಿಕ್ಸರ್) ಫಲವಾಗಿ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ (10-1-48-3), ಮಿಚೆಲ್ ಸ್ಯಾಂಟ್ನರ್ (10-0-37-2), ಗ್ಲೆನ್ ಫಲಿಪ್ಸ್ (3-0-17-2), ರಚಿನ್ ರವೀಂದ್ರ (10-0-76-1), ಟ್ರೆಂಟ್ ಬೌಲ್ಟ್ (10-1-48-1), ಜಿಮ್ಮಿ ನೀಶಮ್ (7-0-56-0) ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹೇರಿದರು.
283ರನ್ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ಆರಂಭಿಕ ಹೊಡೆತದ ಹೊರತಾಗಿಯೂ ಡೆವೋನ್ ಕಾನ್ವೆ (152 ರನ್, 121 ಎಸೆತ, 19 ಬೌಂಡರಿ, 3 ಸಿಕ್ಸರ್), ರಚಿನ್ ರವೀಂದ್ರ (123 ರನ್, 96 ಎಸೆತ, 11 ಬೌಂಡರಿ, 5 ಸಿಕ್ಸರ್) 36.2 ಓವರ್ಗಳಲ್ಲಿ 273 ರನ್ಗಳ ಜತೆಯಾಟದ ಫಲವಾಗಿ ನ್ಯೂಜಿಲೆಂಡ್ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರಿತ್ತು.