ಆರ್​ಸಿಬಿ, ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!

Rashmika
Published on

ಬೆಂಗಳೂರು: ದಕ್ಷಿಣ ಭಾರತದ ಬಹು ಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕ್ರಿಕೆಟ್​ ಮೇಲೆಯೂ ಬಹಳ ಆಸಕ್ತಿ ಇದೆ. ಇತ್ತೀಚೆಗೆ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಐಪಿಎಲ್​ ಅಂದರೆ ನನಗೆ ಹುಚ್ಚು ಎಂದು ಹೇಳಿಕೊಂಡಿರುವ ರಶ್ಮಿಕಾ, ಆರ್​ಸಿಬಿ ಮತ್ತು ಕೊಹ್ಲಿ ಕುರಿತು ಹೇಳಿರುವ ಮಾತು ಅಚ್ಚರಿಗೆ ದೂಡಿದೆ.

ರಶ್ಮಿಕಾಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವೆಂದರೆ ತುಂಬಾ ಇಷ್ಟವಂತೆ. ಈ ಬಾರಿ ಆರ್​ಸಿಬಿ ಖಂಡಿತ ಕಪ್​ ಗೆಲ್ಲುತ್ತಿತ್ತು ಎಂದಿದ್ದಾರೆ. ಆದರೆ, ಕರೊನಾದಿಂದಾಗಿ ಐಪಿಎಲ್​ ಅನ್ನು ಮುಂದೂಡಿರುವುದು ಅಭಿಮಾನಿಗಳ ಪಾಲಿಗೆ ಭಾರಿ ನಿರಾಶೆ ಆಗಿದೆ.

ಸ್ವಭಾತಃ ಆರ್​ಸಿಬಿ ಫ್ಯಾನ್​ ಎಂದಿರುವ ರಶ್ಮಿಕಾ ಅಚ್ಚುಮೆಚ್ಚಿನ ಕ್ರಿಕೆಟರ್​ ಬಗ್ಗೆ ನೀಡಿರುವ ಹೇಳಿಕೆ ಎಲ್ಲರನ್ನು ಅಚ್ಚರಿಗೆ ದೂಡಿದೆ. ಅಂದಹಾಗೆ ರಶ್ಮಿಕಾಗೆ ವಿರಾಟ್​ ಕೊಹ್ಲಿ ಫೇವರಿಟ್​ ಅಲ್ಲವಂತೆ. ರಶ್ಮಿಕಾಗೆ ಚೆನ್ನೈ ಸೂಪರ್​​ಕಿಂಗ್ಸ್​ ನಾಯಕ ಮತ್ತು ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಅಂದರೆ ತುಂಬಾ ಇಷ್ಟವಂತೆ.

ಧೋನಿ ಅವರ ನಾಯಕತ್ವ, ವಿಕೆಟ್​ ಕೀಪಿಂಗ್​ ಮತ್ತು ಅವರ ಬ್ಯಾಟಿಂಗ್​ ತುಂಬಾ ಇಷ್ಟವೆಂದು ರಶ್ಮಿಕಾ ಗುಣಗಾನ ಮಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ರಶ್ಮಿಕಾ ಅವರು ಸದ್ಯ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net