

ಬೆಂಗಳೂರು: ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಉದ್ಘಾಟನೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ನಾಳೆ (ಅ.7) ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 9ನೇ ಆವೃತ್ತಿಯ ಕಬಡ್ಡಿ ಲೀಗ್ಗೆ ಚಾಲನೆ ದೊರೆಯಲಿದೆ. ಮಹಾಮಾರಿ ಕರೊನಾ ಕಾರಣದಿಂದ ಎರಡು ವರ್ಷ ಪ್ರೇಕ್ಷಕರಿಲ್ಲದೆ ಕಬಡ್ಡಿ ಲೀಗ್ ಕಳೆಗುಂದಿತ್ತು. ಇದೀಗ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಹೊಸ ಹುರುಪಿನೊಂದಿಗೆ ಕಬಡ್ಡಿ ತಂಡಗಳು ಕಾದಾಡಲು ಭಾರಿ ತಯಾರಿ ನಡೆಸಿವೆ.
ಈ ಬಾರಿ ಮೂರು ಹಂತಗಳಲ್ಲಿ ಮೂರು ಕಡೆ ಲೀಗ್ ಆಯೋಜನೆ ಮಾಡಲಾಗಿದೆ. ಬೆಂಗಳೂರು, ಪುಣೆ ಮತ್ತು ಹೈದರಾಬಾದ್ನಲ್ಲಿ ಲೀಗ್ ನಡೆಯಲಿದೆ. ಅ.7ರಿಂದ ಅ. 26ರವರೆಗೆ ಮೊದಲ ಹಂತದ ಪಂದ್ಯಗಳು ಬೆಂಗಳೂರಿನ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಅ.28ರಿಂದ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ. ಕೊನೆಯ ಹಂತದ ಪಂದ್ಯಗಳು ಹೈದರಾಬಾದ್ನಲ್ಲಿ ನಡೆಯಲಿವೆ. ಒಟ್ಟು 66 ಪಂದ್ಯಗಳು ನಡೆಯಲಿದೆ ಎಂದು ವಿವೋ ಪ್ರೊ ಕಬಡ್ಡಿ ಲೀಗ್‌ನ ಆಯೋಜಕ ಮಶಾಲ್ ಸ್ಪೋರ್ಟ್ಸ್ ಘೋಷಿಸಿದೆ.
ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್
ಅ.7ರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಹಾಗೂ ಸೀಸನ್ 2ರ ವಿಜೇತ ತಂಡ ಯು ಮುಂಬಾ ಸೆಣಸಾಡಲಿವೆ. ಮೊದಲ ದಿನದ ಎರಡನೇ ಪಂದ್ಯ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ನಡೆಯಲಿದೆ. ಮೂರನೇ ಪಂದ್ಯ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಯುಪಿ ಯೋಧಾಸ್ ನಡುವೆ ನಡೆಯಲಿದೆ.
ಪ್ರತಿ ದಿನ ಮೂರು ಪಂದ್ಯ
ಪ್ರತಿ ಶುಕ್ರವಾರ ರಿಂದ ಭಾನುವಾರ ಪ್ರತಿ ದಿನ ಮೂರು ಪಂದ್ಯಗಳನ್ನು ಆಡಿಸಲಾಗುತ್ತದೆ. ಮೊದಲ ಪಂದ್ಯ ರಾತ್ರಿ 7.30ಕ್ಕೆ ಶುರುವಾದರೆ, ಎರಡನೇ ಪಂದ್ಯ 8.30ಕ್ಕೆ ಮತ್ತು ಮೂರನೇ ಪಂದ್ಯ 9.30ಕ್ಕೆ ಆರಂಭವಾಗುತ್ತದೆ.
ಲೀಗ್ನಲ್ಲಿ ಸೆಣಸಾಡುವ ತಂಡಗಳು
1. ಬೆಂಗಾಲ್ ವಾರಿಯರ್ಸ್
2. ಬೆಂಗಳೂರು ಬುಲ್ಸ್
3. ದಬಾಂಗ್ ದೆಹಲಿ
4. ಗುಜರಾತ್ ಜೈಂಟ್ಸ್
5. ಹರಿಯಾಣ ಸ್ಟೀಲರ್ಸ್
6. ಜೈಪುರ ಪಿಂಕ್ ಪ್ಯಾಂಥರ್ಸ್
7. ಪಟನಾ ಪೈರೇಟ್ಸ್
8. ಪುಣೇರಿ ಪಲ್ಟನ್
9. ತಮಿಳು ತಲೈವಾಸ್
10. ತೆಲುಗು ಟೈಟಾನ್ಸ್
11. ಯು ಮುಂಬಾ
12. ಯು.ಪಿ. ಯೋಧಾಸ್
ಯಾವ್ಯಾವ ಚಾನೆಲ್ ಪ್ರಸಾರವಾಗಲಿದೆ?
ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ 2 HD ಸೇರಿದಂತೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ ಫಸ್ಟ್ , ಸ್ಟಾರ್ ಸ್ಪೋರ್ಟ್ಸ್ ಹಿಂದಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಹಿಂದಿ HD, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ , ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ ಚಾನೆಲ್ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
ಒಟಿಟಿಯಲ್ಲೂ ವೀಕ್ಷಿಸಬಹುದು
ಡಿಸ್ನಿ+ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿ ಆಪ್, ಕಬಡ್ಡಿ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಿದ್ದು, ಅಲ್ಲಿಯೂ ವೀಕ್ಷಣೆ ಮಾಡಬಹುದಾಗಿದೆ.
ವೇಳಾ ಪಟ್ಟಿ ಈ ಕೆಳಂಡಂತಿದೆ...