ಡಬ್ಲ್ಯುಡಬ್ಲ್ಯುಇ ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾದ ಭಾರತದ ಕುವರಿ! ಸಂಜನಾರ ಇಂಟೆರೆಸ್ಟಿಂಗ್​ ಮಾಹಿತಿ ಇಲ್ಲಿದೆ

Sanjana
Published on

ಕೊಚ್ಚಿನ್: ನಾವು ಭಾರತೀಯ ಮಹಿಳೆಯರು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಹಲವು ಕ್ಷೇತ್ರಗಳಲ್ಲಿ ಸಾಧಿಸಿ ತೋರಿದ್ದಾರೆ. ಅದರಲ್ಲೂ ಪುರುಷ ಪ್ರಧಾನವಾಗಿರುವ ವರ್ಲ್ಡ್​ ರೆಸ್ಟಲಿಂಗ್​ ಎಂಟರ್ಟೈನ್​ಮೆಂಟ್​ (ಡಬ್ಲ್ಯುಡಬ್ಲ್ಯುಇ) ನಲ್ಲಿ ಮಹಿಳಾ ಸಂಖ್ಯೆ ಬೆರಳಣಿಕೆ. ಭಾರತೀಯರಂತೂ ಇಲ್ಲವೇ ಇಲ್ಲ. ಆದರೆ, ಇಲ್ಲ ಎಂಬುದನ್ನು ಇದೀಗ ಕೇರಳ ಯುವತಿ ಸುಳ್ಳಾಗಿಸಿದ್ದಾರೆ.

ಹೌದು, ಡಬ್ಲ್ಯುಡಬ್ಲ್ಯುಇ ಗೆ ಭಾರತದ ಮಿಕ್ಸ್ಡ್​ ಮಾರ್ಷಲ್​ ಆರ್ಟ್ಸ್​ (ಎಂಎಂಎ) ಸ್ಟಾರ್​ ಸಂಜನ ಜಾರ್ಜ್​ ಆಯ್ಕೆಯಾಗಿದ್ದಾರೆ. ವಿಶ್ವದ ಅತಿದೊಡ್ಡ ಹಾಗೂ ಹೆಚ್ಚು ಪ್ರಖ್ಯಾತಿ ಪಡೆದಿರುವ ಕುಸ್ತಿ ಉದ್ಯಮದಲ್ಲಿ ಸಂಜನಾ ಸ್ಥಾನ ಪಡೆದಿರುವುದು ಅವರ ಅಭಿಮಾನಿಗಳಿಗೆ ಭಾರಿ ಖುಷಿಯನ್ನು ತಂದಿದೆ.

26 ವರ್ಷದ ಸಂಜನಾ ಕೇರಳದ ಕೊಟ್ಟಾಯಂ ಮೂಲದವರು. ಸದ್ಯ ಅಮೆರಿಕದ ಒರ್ಲ್ಯಾಂಡೋದಲ್ಲಿರುವ ಸಂಜನಾ ಡಬ್ಲ್ಯುಡಬ್ಲ್ಯುಇ ಗೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ತನ್ನ ಎಂಎಂಎ ಕೌಶಲದಿಂದಲೇ ಪ್ರಖ್ಯಾತಿ ಹೊಂದಿರುವ ಸಂಜನಾ, ಡಬ್ಲ್ಯುಡಬ್ಲ್ಯುಇ ಅಲ್ಲಿ ಮಿಂಚಲು ಭಾರಿ ತಯಾರಿ ನಡೆಸುತ್ತಿದ್ದಾರೆ.

ಚಿಕ್ಕಂದಿನಿಂದಲೂ ಡಬ್ಲ್ಯುಡಬ್ಲ್ಯುಇ ನ ದೊಡ್ಡ ಅಭಿಮಾನಿಯಾಗಿರುವ ಸಂಜನಾ, ತಾನು ಕುಸ್ತಿ ಅಖಾಡದಲ್ಲಿ ಇಳಿಯಬೇಕೆಂಬುದು ಕನಸಾಗಿತ್ತು. ಇಂದು ತಮ್ಮ ಪರಿಶ್ರಮದಿಂದಲೇ ಕೊನೆಗೂ ತಮ್ಮ ಗುರಿ ಸಾಧಿಸಿದ್ದಾರೆ. ಈ ವಿಚಾರವನ್ನು ಸ್ವತಃ ಸಂಜನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net