

ನವದೆಹಲಿ: ಅಕ್ಟೋಬರ್ 16ರಿಂದ ಟಿ20 ವಿಶ್ವಕಪ್ ಶುರುವಾಗಲಿದ್ದು, ದಿನಗಣನೆ ಆರಂಭವಾಗಿದೆ. ಮಹತ್ವ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ 16 ತಂಡಗಳ ನಾಯಕರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.
ಪತ್ರಿಕಾಗೋಷ್ಠಿಯ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪಾಕಿಸ್ತಾನದ ನಾಯಕ್ ಬಾಬರ್ ಅಜಾಮ್ ಸೇರಿದಂತೆ ಎಲ್ಲ ತಂಡದ ನಾಯಕರು ಫೋಟೋಶೂಟ್ನಲ್ಲಿ ಭಾಗವಹಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ. ಇದನ್ನು ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ.
ಜಂಟಿಯಾಗಿ ವಿವಿಧ ಭಂಗಿಗಳಲ್ಲಿ ಫೋಟೋಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿರುವ ಭಾರತ ಮತ್ತು ಪಾಕ್ ತಂಡದ ನಾಯಕರು ತೆಗಿಸಿರುವ ಫೋಟೋವನ್ನು ಉಭಯ ರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಇದೇನು ಪ್ರೀ ವೆಡ್ಡಿಂಗ್ ಫೋಟೋಶೂಟಾ? ಎಂದು ಮೀಮ್ಸ್ಗಳನ್ನು ಹರಿಬಿಡುವ ಮೂಲಕ ವಿಶ್ವಕಪ್ ಟಿ20 ತಂಡಗಳ ನಾಯಕರ ಫೋಟೋಶೂಟ್ ಅನ್ನು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್)