

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಲಿದ್ದು, ಇಂದು ಆರಂಭವಾಗಿರುವ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಈವರೆಗೆ ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಫಾಪ್ ಡುಪ್ಲೆಸಿಸ್, ಶಿಖರ್ ಧವನ್ ಹಾಗೂ ಆರ್ ಅಶ್ವಿನ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರ ಜತೆಯಲ್ಲಿ ಕೆಲ ದೇಶಿಯ ಪ್ರತಿಭೆಗಳು ಕೂಡ ಬಿಕರಿಯಾಗಿದ್ದಾರೆ.
ಇಂದಿನ ಹರಾಜಿ ಪ್ರಕ್ರಿಯೆಯಲ್ಲಿ ಬಿಕರಿಯಾದ ಆಟಗಾರರ ಹೆಸರು ಮತ್ತು ಖರೀದಿಸಿದ ತಂಡ ಹಾಗೂ ಬಿಕರಿಯಾದ ಮೊತ್ತದ ವಿವರ ಈ ಕೆಳಕಂಡಂತಿದೆ.
* ಶ್ರೇಯಸ್ ಅಯ್ಯರ್, ಕೊಲ್ಕತ್ತ ನೈಟ್ ರೈಡರ್ಸ್ (12.25 ಕೋಟಿ ರೂ.)
* ಮೊಹಮ್ಮದ್ ಶಮಿ, ಗುಜರಾತ್ ಟೈಟನ್ಸ್ (6.25 ಕೋಟಿ ರೂ)
* ವಿದೇಶಿ ಆಟಗಾರ ಫಾಫ್ ಡುಪ್ಲೆಸಿಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (7 ಕೋಟಿ ರೂ.)
* ಶಿಖರ್ ಧವನ್, ಪಂಜಾಬ್ ಕಿಂಗ್ಸ್ (8.25)
* ಆರ್. ಅಶ್ವಿನ್, ರಾಜಸ್ಥಾನ ರಾಯಲ್ಸ್ (5 ಕೋಟಿ ರೂ.)
* ವಿದೇಶಿ ಆಟಗಾರ ಕ್ವಿಂಟನ್ ಡಿ ಕಾಕ್, ಲಖನೌ (6.75 ಕೋಟಿ ರೂ.)
* ವಿದೇಶಿ ಆಟಗಾರ ಟ್ರೆಂಟ್ ಬೋಲ್ಟ್, ರಾಜಸ್ಥಾನ ರಾಯಲ್ಸ್ (8 ಕೋಟಿ ರೂ.)
* ವಿದೇಶಿ ಆಟಗಾರ ಕಾಗಿಸೋ ರಬಾಡ, ಪಂಜಾಬ್ ಕಿಂಗ್ಸ್ (9.25 ಕೋಟಿ ರೂ.)
* ವಿದೇಶಿ ಆಟಗಾರ ಪ್ಯಾಟ್ ಕ್ಯುಮಿನ್ಸ್, ಕೆಕೆಆರ್ (7.25 ಕೋಟಿ ರೂ)
* ವಿದೇಶಿ ಆಟಗಾರ ಡೇವಿಡ್ ವಾರ್ನರ್, ಡೆಲ್ಲಿ ಕ್ಯಾಪಿಟಲ್ಸ್ (6.25 ಕೋಟಿ ರೂ.)
* ಮನೀಶ್ ಪಾಂಡೆ, ಲಖನೌ ಸೂಪರ್ ಗೇಂಟ್ಸ್ (4.6 ಕೋಟಿ ರೂ.)
* ವಿದೇಶಿ ಆಟಗಾರ ಹೆಟ್ಮೆಯರ್, ರಾಜಸ್ಥಾನ ರಾಯಲ್ಸ್ (8.50 ಕೋಟಿ ರೂ.)
* ರಾಬಿನ್ ಉತ್ತಪ್ಪ, ಚೆನ್ನೈ ಸೂಪರ್ ಕಿಂಗ್ಸ್ (2 ಕೋಟಿ ರೂ.)
* ವಿದೇಶಿ ಆಟಗಾರ ಜಾಸನ್ ರಾಯ್, ಗುಜರಾತ್ ಟೈಟನ್ಸ್ (2 ಕೋಟಿ ರೂ.)
* ದೇವದತ್ ಪಡಿಕ್ಕಲ್, ರಾಜಸ್ಥಾನ ರಾಯಲ್ಸ್ (7.75 ಕೋಟಿ ರೂ.)
* ವಿದೇಶಿ ಆಟಗಾರ ಡ್ವೈನ್ ಬ್ರಾವೋ, ಚೆನ್ನೈ ಸೂಪರ್ ಕಿಂಗ್ಸ್ (4.40 ಕೋಟಿ ರೂ.)
* ನಿತೀಶ್ ರಾಣ, ಕೊಲ್ಕತ್ತ ನೈಟ್ ರೈಡರ್ಸ್ (8 ಕೋಟಿ ರೂ.)
* ವಿದೇಶಿ ಆಟಗಾರ ಜಾಸನ್ ಹೋಲ್ಡರ್, ಲಖನೌ ಸೂಪರ್ ಗೇಂಟ್ಸ್ (8.75 ಕೋಟಿ ರೂ.)
* ಹರ್ಷಲ್ ಪಟೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (10.75)
* ದೀಪಕ್ ಹೂಡ, ಲಖನೌ ಸೂಪರ್ ಗೇಂಟ್ಸ್ (5.75 ಕೋಟಿ ರೂ.)