ನಿಮಗೆ ಸಲ್ಮಾನ್​ ಖಾನ್​ ಗೊತ್ತಾ? ಕಾಗಿಸೋ ರಬಾಡ ಕೊಟ್ಟ ಉತ್ತರ ಕೇಳಿ ದಂಗಾದ ಆ್ಯಂಕರ್​!

Salman
Published on

ನವದೆಹಲಿ: ಪಂಜಾಬ್​ ಕಿಂಗ್ಸ್​ ತಂಡದ ಸ್ಟಾರ್​ ಬೌಲರ್ ಕಾಗಿಸೋ ರಬಾಡ ಐಪಿಎಲ್​ ಆ್ಯಂಕರ್​ ಒಬ್ಬರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರ ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಪ್ರಸ್ತುತ ಐಪಿಎಲ್​ನಲ್ಲಿ ಈಗಾಗಲೇ 11 ಪಂದ್ಯಗಳನ್ನು ಆಡಿರುವ ಪಂಜಾಬ್​ ತಂಡ 6 ಪಂದ್ಯಗಳಲ್ಲಿ ಸೋತು 7ನೇ ಸ್ಥಾನದಲ್ಲಿದೆ. ಆದರೂ ಪ್ಲೇಆಫ್​ ಹಂತಕ್ಕೇರಲು ಇನ್ನು ಅವಕಾಶವಿದ್ದು, ಮುಂದಿನ ಶುಕ್ರವಾರ (ಮೇ.13) ಆರ್​ಸಿಬಿ ವಿರುದ್ಧ ನಡೆಯುವ ಪಂದ್ಯದ ನಿರ್ಣಾಯಕವಾಗಿದೆ.

ಈ ಪಂದ್ಯಕ್ಕೂ ಮುನ್ನ ಪಂಜಾಬ್​ ಕಿಂಗ್ಸ್​ನ ವಿದೇಶಿ ಆಟಗಾರರು ಫನ್​ ಚಾಟ್​ ಸೆಸೆನ್ಸ್​ನಡೆಸಿದ್ದು, ಹಿಂದಿ ಸಿನಿಮಾಗಳ ಡೈಲಾಗ್​ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ವೇಳೆ ಆ್ಯಂಕರ್​ ಕೇಳಿದ ಪ್ರಶ್ನೆಗೆ ರಬಡಾ ಕೊಟ್ಟ ಉತ್ತರ ಮಾತ್ರ ಸಲ್ಮಾನ್​ ಖಾನ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಿಮಗೆ ಸಲ್ಮಾನ್​ ಖಾನ್​ ಗೊತ್ತಾ? ಎಂದು ಆ್ಯಂಕರ್​ ರಬಡಾ ಅವರನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರ ನೀಡುವ ರಬಾಡ ಗೊತ್ತಿಲ್ಲ, ನನಗೆ ರಶೀದ್​ ಖಾನ್​ ಮಾತ್ರ ಗೊತ್ತು ಎಂದಿದ್ದಾರೆ. ಈ ಉತ್ತರ ಕೇಳಿದ ಆ್ಯಂಕರ್​ ಕೂಡ ಒಂದು ಕ್ಷಣ ಅವಕ್ಕಾಗಿದ್ದಾರೆ.

ವಿಡಿಯೋದಲ್ಲಿ ರಬಡಾ ಸಲ್ಮಾನ್​ ಖಾನ್​ ಅವರ ವಾಂಟೆಡ್​ ಚಿತ್ರದ ಡೈಲಾಗ್​ ಅನ್ನು ಹೊಡೆಯಲು ಯತ್ನಿಸಿದ್ದಾರೆ. ರಬಡಾ ಮಾತ್ರವಲ್ಲ ಇತರೆ ವಿದೇಶಿ ಆಟಗಾರರು ಬಾಲಿವುಡ್​ ಸಿನಿಮಾಗಳ ಡೈಲಾಗ್​ಗೆ ಡಬ್​ಸ್ಮ್ಯಾಶ್​ ಮಾಡಲು ಯತ್ನಿಸಿ ಕೆಲ ಕಾಲ ಫನ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪಂಜಾಬ್​ ಕಿಂಗ್ಸ್​ ಯೂಟ್ಯೂಬ್​ ಚಾನಲ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net