

ನವದೆಹಲಿ: ಸಂದರ್ಶನ ಕೊಡಲು ನಿರಾಕರಿಸಿದ್ದಕ್ಕೆ ಕ್ರಿಕೆಟಿಗ ವೃದ್ಧಿಮಾನ್ ಸಹಾ ಅವರಿಗೆ ಬೆದರಿಕೆ ಹಾಕಿದ್ದ ಪತ್ರಕರ್ತ ಬೊರಿಯಾ ಮಜುಮ್ದಾರ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡು ವರ್ಷಗಳ ನಿಷೇಧವನ್ನು ಹೇರಿದೆ. ಈ ಪ್ರಕರಣವನ್ನು ಪರಿಶೀಲಿಸಲು ಬಿಸಿಸಿಐ ತ್ರಿಸದಸ್ಯ ಸಮಿತಿಯನ್ನು ನೇಮಿಸಿತ್ತು.
ಕಳೆದ ಫೆಬ್ರವರಿಯಲ್ಲಿ ಸಹಾ ಅವರು ಪತ್ರಕರ್ತ ಮಜುಮ್ದಾರ್ ಜತೆ ಆನ್ಲೈನ್ನಲ್ಲಿ ಚಾಟ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ ಅನ್ನು ಸಹಾ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ನಾನು ಅವಮಾನಗಳನ್ನು ದಯೆಯಿಂದ ತೆಗೆದುಕೊಳ್ಳುವುದಿಲ್ಲ ಮತ್ತು ನಾನದನ್ನು ನೆನಪಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಸಹಾ ಅವರಿಗೆ ಪತ್ರಕರ್ತ ಬೆದರಿಕೆ ಹಾಕಿದ್ದ. ಆ ಸಮಯದಲ್ಲಿ ಪತ್ರಕರ್ತನ ಹೆಸರನ್ನು ಸಾಹ ಅವರು ಬಹಿರಂಗಪಡಿಸಿರಲಿಲ್ಲ.
ಯಾವಾಗ ಈ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿತೋ ಆವಾಗ ಸಹಾ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿದರು. ಈ ಪ್ರಕರಣದ ತನಿಖೆ ನಡೆಸಲು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ನೇತೃತ್ವದ ಬಿಸಿಸಿಐ ಸಮಿತಿಯು ರಚನೆಯಾಯಿತು. ಬಳಿಕ ಸಮಿತಿ ಸಾಹ ಅವರನ್ನು ಸಾಕ್ಷಿ ಕೇಳಿದಾಗ ಪತ್ರಕರ್ತನ ಹೆಸರನ್ನು ಗುರುತನ್ನು ದೃಢಪಡಿಸಿದರು.
ಈ ಘಟನೆಯ ಬಳಿಕ ಸಹಾ ಅವರಿಗೆ ಕ್ರಿಕೆಟ್ ಸಮುದಾಯದಿಂದ ಭಾರೀ ಬೆಂಬಲ ವ್ಯಕ್ತವಾಯಿತು ಮತ್ತು ಪತ್ರಕರ್ತನಿಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಅಂತಿಮವಾಗಿ ಬಿಸಿಸಿಐ ಸಮಿತಿ ಪತ್ರಕರ್ತ ಬೊರಿಯಾ ಮಜುಮ್ದಾರ್ಗೆ ಎರಡು ವರ್ಷಗಳ ನಿಷೇಧವನ್ನು ಹೇರಿದೆ. (ಏಜೆನ್ಸೀಸ್)