ಇಂಗ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ರುತುರಾಜ್​ಗೆ ಅವಕಾಶ ಸಿಗುವುದಿಲ್ಲ: ಆಕಾಶ್ ಚೋಪ್ರಾ

Ruthuraj
Published on

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂಗ್ಲೆಂಡ್​ನ ಸೌತಂಪ್ಟನ್​ನಲ್ಲಿ ಗುರುವಾರ (ಜುಲೈ 7) ಆರಂಭವಾಗಲಿದ್ದು, ಬ್ಯಾಟ್ಸ್​ಮನ್ ರುತುರಾಜ್ ಗಾಯಕ್ವಾಡ್ ಅವರಿಗೆ ಭಾರತ ಪರ ಆರಂಭಿಕ ಆಟವಾಡಲು ಅವಕಾಶ ಸಿಗುವುದಿಲ್ಲ ಎಂದು ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ನಾಯಕ ರೋಹಿತ್ ಶರ್ಮಾ ಕೋವಿಡ್-19ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವುದರಿಂದ ಆಟಗಾರರ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ರುತುರಾಜ್ ಗಾಯಕ್ವಾಡ್ ಟಿ20 ಪಂದ್ಯಗಳಲ್ಲಿ ತನ್ನ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರೂ ಇಂಗ್ಲೆಂಡ್​ ವಿರುದ್ಧ ಸ್ಥಾನ ಸಿಗುವುದು ಸಂದೇಹವಾಗಿದೆ.

ರೋಹಿತ್ ಟಿ20 ಗೆ ಹಿಂತಿರುಗಿದ್ದಾರೆ. ಈಗ ಯಾರು ಹೊರಗುಳಿಯುತ್ತಾರೆ? ರುತುರಾಜ್ ಅವರಿಗೆ ಮತ್ತೊಂದು ಅವಕಾಶ ಸಿಗುವುದಿಲ್ಲ. ಸಂಜು ಸ್ಯಾಮ್ಸನ್​ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆಯೇ? ಹೂಡಾ ಬಗ್ಗೆ ಏನು? ನಾಳೆ ಭಾರತವು ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತದೆ ಎಂದು ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.

Koo App
Rohit is back for the T20i. Who goes out now? Ruturaj won’t get another opportunity but will Sanju retain his place? What about Hooda? Lots of questions will get answered tomorrow when India takes on Jos Buttler’s England. Can’t wait 😊-Aakash Chopra (@cricketaakash)6 July 2022

ಟಿ20ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋ ಪಟೇಲ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ ದೀಪ್ ಸಿಂಗ್, ಉಮ್ರಾನ್ ಮಲಿಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net