ಬೆಂಗಳೂರು ಎಟಿಪಿ ಚಾಲೆಂಜರ್: ಮಾನಸ್, ಕರಣ್, ರಾಮ್ ನಿರ್ಗಮನ,  ಅಗ್ರ ಶ್ರೇಯಾಂಕಿತ ಕೊಪ್ರಿವಗೆ ಶಾಕ್ ನೀಡಿದ ಬಾರ್ಟನ್

New Project
Published on

ಬೆಂಗಳೂರು: ಅರ್ಹತಾ ಸುತ್ತಿನ ಆಟಗಾರ ಹೈನೆಕ್ ಬಾರ್ಟನ್ ಪುರುಷರ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ 125 ಟೆನಿಸ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ವಿಟ್ ಕೊಪ್ರಿವಗೆ ಮೊದಲ ಸುತ್ತಿನಲ್ಲಿ ಆಘಾತ ನೀಡಿದ್ದಾರೆ. ಆತಿಥೇಯ ಯುವ ಆಟಗಾರ ಮಾನಸ್ ಧಾಮ್ನೆ, ಅನುಭವಿ ರಾಮ್‌ಕುಮಾರ್ ರಾಮನಾಥನ್, ಕರಣ್ ಸಿಂಗ್ ಮೊದಲ ಸುತ್ತಿನಲ್ಲಿ ನಿರಾಸೆ ಮೂಡಿಸಿದ್ದಾರೆ. ಆಸೀಸ್ ತಾರೆಯರಾದ ಟ್ರಿಸ್ಟಾನ್ ಸ್ಕೂಲ್‌ಕೇಟ್, ಬೆರ್ನಾರ್ಡ್ ಟೊಮಿಕ್, ಶ್ರೇಯಾಂಕರಹಿತ ಜೇಮ್ಸ್ ಮೆಕ್‌ಕೇಬ್ ಪ್ರಿ ಕ್ವಾರ್ಟರ್‌ೈನಲ್‌ಗೆ ಎಂಟ್ರಿ ನೀಡಿದ್ದಾರೆ.

ಉದ್ಯಾನ ನಗರಿಯ ಕೆಎಸ್‌ಎಲ್‌ಟಿಎ ಅಂಕಣದಲ್ಲಿ ಮಂಗಳವಾರ 32ರ ಘಟ್ಟದ ಸಿಂಗಲ್ಸ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಹೈನೆಕ್ ಬಾರ್ಟನ್ 4-6, 6-4, 6-3ರಿಂದ ದೇಶಬಾಂಧವ ವಿಪ್ ಕೊಪ್ರಿವಾಗೆ ಆಘಾತಕಾರಿ ಸೋಲುಣಿಸಿ ಮುನ್ನಡೆದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಎದುರಿಸಿದ ಬಾರ್ಟನ್ ನಂತರ ಎರಡು ಸೆಟ್‌ಗಳಲ್ಲಿ ಕಂಬ್ಯಾಕ್ ಮಾಡಿ ಅಚ್ಚರಿಯ ಲಿತಾಂಶ ನೀಡಿದರು. ಕಳೆದ ವಾರವಷ್ಟೇ ದೆಹಲಿ ಓಪನ್ ಡಬಲ್ಸ್‌ನಲ್ಲಿ ಇವರಿಬ್ಬರೂ ಸೆಮೀಸ್‌ಗೇರಿದ್ದರು. ಒಂದನೇ ಅಂಕಣದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ಓಪನ್ ಚಾಂಪಿಯನ್, 5ನೇ ಶ್ರೇಯಾಂಕಿತ ಕೈರಿಯನ್ ಜಾಕ್ವೆಟ್, ಶ್ರೇಯಾಂಕ ರಹಿತ ಆಸ್ಟ್ರೇಲಿಯಾದ ಜೇಮ್ಸ್ ಮೆಕ್‌ಕೇಬ್ ವಿರುದ್ಧ 6-7(8), 6-1, 6-2 ಸೆಟ್‌ಗಳಿಂದ ಅಚ್ಚರಿಯ ಸೋಲು ಅನುಭವಿಸಿದರು.

ಮಾಜಿ ವಿಶ್ವ ನಂ. 17 ಬರ್ನಾರ್ಡ್ ಟೊಮಿಕ್,ಅರ್ಹತಾ ಸುತ್ತಿನ ಇಲಿಯಾ ಸಿಮಾಕಿನ್‌ರನ್ನು 3-6, 7-6(4), 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಎರಡನೇ ಶ್ರೇಯಾಂಕಿತ ಟ್ರಿಸ್ಟಾನ್ ಸ್ಕೂಲ್‌ಕೇಟ್ 7-5, 6-7(5), 6-3 ರಿಂದ ಉಜ್‌ಬೈಕಿಸ್ತಾನದ ಖುಮೊಯೊನ್ ಸುಲ್ತಾನೋವ್ ಎದುರು ರೋಚಕ ಗೆಲುವು ಒಲಿಸಿಕೊಂಡರು. ್ರಾನ್ಸ್‌ನ ಎಂಜೊ ಕೌಕಾಡ್ 1-6,0-1 ರಿಂದ ಗ್ರೇಟ್ ಬ್ರಿಟನ್‌ನ ಬಿಲ್ಲಿ ಹ್ಯಾರಿಸ್ ಎದುರು ಹಿನ್ನಡೆಯಲ್ಲಿದ್ದಾಗ ಪಂದ್ಯದಿಂದ ಹಿಂದೆ ಸರಿದರೆ, ಸ್ಪೇನ್ ನಿಕೋಲಸ್ ಅಲ್ವರೆಜ್ ವರೋನಾ ಎದುರು 6-3, 4-2 ರಿಂದ ಹಿನ್ನಡೆ ಕಂಡ ಹ್ಯೂಗೊ ಬ್ಲಾಂಚೆಟ್ ಗಾಯದ ಸಮಸ್ಯೆಯಿಂದ ಕಣದಿಂದ ನಿವೃತಗೊಂಡರು. ನಿಕೋಲಸ್ ಅಲ್ವರೆಜ್,ಬಿಲ್ಲಿ ಹ್ಯಾರಿಸ್ ಸುಲಭವಾಗಿ ಪ್ರಿ ಕ್ವಾರ್ಟರ್‌ೈನಲ್ ಅರ್ಹತೆ ಪಡೆದರು.

ಭಾರತೀಯರಿಗೆ ನಿರಾಸೆ

ವೈಲ್ಡ್ ಕಾರ್ಡ್ ಎಂಟ್ರಿ 17 ವರ್ಷದ ಸೆನ್ಸೆಶನ್ ಮಾನಸ್ ಧಾಮ್ನೆ ಹೋರಾಟ ಮೊದಲ ಸುತ್ತಿನಲ್ಲಿ ಕೊನೆಗೊಂಡಿದೆ. ಮೊದಲ ಸೆಟ್ ಅನ್ನು 3-6ರಿಂದ ಸೋಲು ಅನುಭವಿಸಿದ ಮಾನಸ್, 6-3 ರಿಂದ ಎರಡನೇ ಸೆಟ್ ವಶಪಡಿಸಿಕೊಂಡು ರಷ್ಯಾದ ಪೆಟ್ರ ಬಾರ್ ಬಿರ್ಯುಕೋವ್ ಎದುರು ದಿಟ್ಟ ಹೋರಾಟ ತೋರಿದರು. ಟೈ ಬೇಕರ್‌ಗೆ ಸಾಗಿದ ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮಾನಸ್ 6-7 (3) ರಿಂದ ನಿರಾಸೆ ಕಂಡರು.

ಮತ್ತೋರ್ವ ಭಾರತೀಯ ಕರಣ್ ಸಿಂಗ್ ಮುಖ್ಯ ಡ್ರಾದ ಮೊದಲ ಸುತ್ತಿನಲ್ಲಿ 6-4,4-6, 7-6(3) ಸೆಟ್‌ಗಳಿಂದ ಆಸ್ಟ್ರೀರಿಯಾದ ಜುರಿಜ್ ರೋಡಿಯೊನೊವ್ ವಿರುದ್ಧ ಸೋತಿತು. ವೈಲ್ಡ್ ಕಾರ್ಡ್‌ಎಂಟ್ರಿ ರಾಮ್‌ಕುಮಾರ್ 6-4,4-6, 7-6(3) ಏಳನೇ ಶ್ರೇಯಾಂಕಿತ ಶಿಂಟಾರೊ ಮೊಚಿಜುಕಿ ವಿರುದ್ಧ ಪರಾಭವಗೊಂಡರು. ಇದರೊಂದಿಗೆ ಶಿಂಟಾರೂ ಪ್ರಿ ಕ್ವಾರ್ಟರ್‌ೈನಲ್‌ಗೇರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net