PV Sindhu Marriage: ಪಿವಿ ಸಿಂಧು ಅವ್ರ ಭಾವಿ ಪತಿ ವೆಂಕಟ ದತ್ತ ಸಾಯಿ ಯಾರು ಗೊತ್ತಾ?

pvsindhu
Published on

PV Sindhu Marriage: ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಈ ಕುರಿತಾಗಿ ಪಿವಿ ಸಿಂಧು ಅವರ ತಂದೆ ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಪಿ ವಿ ಸಿಂಧು ಅವರ ಅಭಿಮಾನಿಗಳು ಯಾರು ವರ ಎಂದು ಸೋಶಿಯಲ್​​  ಮೀಡಿಯಾದಲ್ಲಿ ಹುಡುಕುತ್ತಿದ್ದಾರೆ.

ಭಾರತೀಯ ಕ್ರೀಡಾ ತಾರೆ ಹೈದರಾಬಾದ್ ಮೂಲದ ಬ್ಯುಸಿನೆಸ್ ಎಕ್ಸಿಕ್ಯೂಟಿವ್ ಜೊತೆ ಡಿ.22ರಂದು ರಾಜಸ್ಥಾನದ ‘ಲೇಕ್ ಸಿಟಿ’ ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ಸಿಂಧು ತಂದೆ ಪಿ.ವಿ.ರಾಮಣ್ಣ ತಿಳಿಸಿದ್ದಾರೆ.

 ಡಿ.24ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕೂಟವನ್ನೂ ಆಯೋಜಿಸಲಾಗಿದೆ. ಈ ಆರತಕ್ಷತೆ ಅದ್ಧೂರಿಯಾಗಿ ನಡೆಯಲಿದೆಯಂತೆ. ಆರತಕ್ಷತೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು, ಕ್ರೀಡಾ ಪಟುಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಸಿಂಧು ಮದುವೆ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಪಿವಿ ಸಿಂಧು ತೆಲಂಗಾಣ ರಾಜ್ಯದ ಯುವತಿ. ನಿಖಿಲ್ ಎಂಬ ಉದ್ಯಮಿಯನ್ನು ಮದುವೆಯಾಗಲಿದ್ದಾರೆ. ನಿಖಿಲ್ ಪ್ರಮುಖ  ಉದ್ಯಮಿಯಾಗಿದ್ದಾರೆ ಎನ್ನಲಾಗಿದೆ.

ವೆಂಕಟ ದತ್ತ ಸಾಯಿ ಯಾರು?

ವೆಂಕಟ ದತ್ತ ಸಾಯಿ ಪ್ರಸ್ತುತ ಹೈದರಾಬಾದಿನ ಪೊಸಿಡೆಕ್ಸ್ ಟೆಕ್ನಾಲಜೀಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ BBA ಕೋರ್ಸ್ ಅನ್ನು 2018 ರಲ್ಲಿ ಮಹಾರಾಷ್ಟ್ರದ ಪುಣೆಯ ಫ್ಲೇಮ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಅವರು ಲೆಕ್ಕಪತ್ರ ಮತ್ತು ಹಣಕಾಸು ವಿಭಾಗದಲ್ಲಿ ವಿಶೇಷತೆಯನ್ನು ಹೊಂದಿದ್ದಾರೆ.

ವೆಂಕಟ ದತ್ತಸಾಯಿ ಅವರು ಬೆಂಗಳೂರಿನ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ವಿಶೇಷತೆಯನ್ನು ಹೊಂದಿದ್ದಾರೆ. ಜೆಎಸ್‌ಡಬ್ಲ್ಯೂ ಕಂಪನಿಯಲ್ಲಿ ಇಂಟರ್ನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅದೇ ಕಂಪನಿಯಲ್ಲಿ ಆಂತರಿಕ ಸಲಹೆಗಾರರಾಗಿ ನೇಮಕಗೊಂಡರು.2019 ರಿಂದ, ವೆಂಕಟ ದತ್ತಸಾಯಿ ಅವರು ಸೋರ್ ಆಪಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐನಂತಹ ಪ್ರಮುಖ ಬ್ಯಾಂಕ್‌ಗಳಿಗೆ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ತ್ವರಿತ ಕ್ರೆಡಿಟ್ ಸ್ಕೋರ್ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಪಿ.ವಿ.ಸಿಂಧು ಮತ್ತು ವೆಂಕಟ ದತ್ತಸಾಯಿ ಕುಟುಂಬದವರು ಹಳೆಯ ಪರಿಚಿತರು. ಆ ಪರಿಚಯದ ಆಧಾರದ ಮೇಲೆ ಅವರ ಮದುವೆ ನಿಶ್ಚಯವಾಯಿತು. ಒಂದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net