ಇಂದಿನಿಂದ ಭಾರತ-ಕಿವೀಸ್ ಅಂತಿಮ ಟೆಸ್ಟ್: ತವರಿನಲ್ಲಿ ಒಮ್ಮೆ ಮಾತ್ರ ವೈಟ್‌ವಾಷ್

New Project
Published on

ಮುಂಬೈ: ತವರಿನ 12 ವರ್ಷಗಳ ಪ್ರಾಬಲ್ಯಕ್ಕೆ ಬ್ರೇಕ್ ಬಿದ್ದ ಬಳಿಕ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ತಪ್ಪಿಸಲು ಭಾರತ ತಂಡ ಸೆಣಸಬೇಕಿದೆ. ಶುಕ್ರವಾರದಿಂದ ವಾಂಖೆಡೆಯಲ್ಲಿ ನಡೆಯಲಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರೋಹಿತ್ ಶರ್ಮ ಪಡೆಯ ಪಾಲಿಗೆ ಪ್ರತಿಷ್ಠೆಯ ಕಾದಾಟ ಎನಿಸಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್(ಡಬ್ಲುೃಟಿಸಿ) ಮೂರನೇ ಆವೃತ್ತಿಯ ೈನಲ್ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ‌್ಯ ಎನಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಸದ್ಯ 0-2 ಮುನ್ನಡೆ ಸಾಧಿಸಿದೆ.

ಎರಡು ಬಾರಿ ಡಬ್ಲುೃಟಿಸಿ ರನ್ನರ್ ಅಪ್ ಆಗಿರುವ ಭಾರತ ಸತತ ಮೂರನೇ ಬಾರಿಗೆ ೈನಲ್‌ಗೇರಲು ಹಾಲಿ ಋತುವಿನಲ್ಲಿ ಉಳಿದಿರುವ 6 ಪಂದ್ಯಗಳಲ್ಲಿ 4 ಗೆಲುವು ಅಗತ್ಯ. ಆದರೆ ಸ್ಪಿನ್ನರ್‌ಗಳ ಎದುರು ತವರಿನಲ್ಲಿ ತನ್ನ ಕಾರ್ಯತಂತ್ರದ ಎದುರು ಸತತ 2 ಸೋಲುಂಡಿರುವುದು ಟೀಮ್ ಇಂಡಿಯಾಗೆ ಹಿನ್ನಡೆ ಎನಿಸಿದೆ. ಅದರಲ್ಲೂ ಪ್ರಮುಖವಾಗಿ ಸ್ಪಿನ್ನರ್‌ಗಳ ಎದುರು ಪುಣೆಯಲ್ಲಿ ಬ್ಯಾಟಿಂಗ್ ವೈಲ್ಯ ಅನುಭವಿಸಿರುವ ರೋಹಿತ್ ಪಡೆ ಪುಟಿದೇಳಬೇಕಿದೆ. ಮುಂಬೈ ಟೆಸ್ಟ್‌ಗೆ ಪೂರ್ವ ಸಿದ್ಧತೆಯಾಗಿ ಸ್ಥಳೀಯ 35ಕ್ಕೂ ಹೆಚ್ಚು ನೆಟ್ಸ್ ಬೌಲರ್‌ಗಳ ನೆರವಿನೊಂದಿಗೆ ಕಠಿಣ ತಾಲೀಮು ನಡೆಸಿರುವ ಭಾರತ, ಕಿವೀಸ್‌ಗೆ ತಿರುಗೇಟು ನೀಡುವ ನಿರೀಕ್ಷೆಯಲ್ಲಿದೆ.

ಮುಂಬರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಮುನ್ನ ಈ ಪಂದ್ಯದ ಗೆಲುವು ಟೀಮ್ ಇಂಡಿಯಾಗೆ ಆತ್ಮವಿಶ್ವಾಸ ತುಂಬಲಿದೆ. ಆದರೆ ಸರಣಿಯಲ್ಲಿ 46, 156, 145 ರನ್‌ಗಳಿಗೆ ಆಲೌಟ್ ಆಗಿರುವುದು ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಎಚ್ಚರಿಕೆ ಕರೆ ಎನಿಸಿದೆ. ಪ್ರಮುಖವಾಗಿ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ವೈಲ್ಯ ತಂಡಕ್ಕೆ ಹಿನ್ನಡೆ ಎನಿಸಿದೆ. ಎರಡು ಟೆಸ್ಟ್‌ನಲ್ಲಿ ರೋಹಿತ್ ವೇಗದ ಬೌಲರ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ತವರಿನ ಅಂಗಣದಲ್ಲಿ ರೋಹಿತ್ ಾರ್ಮ್‌ಗೆ ಮರಳುವ ನಿರೀಕ್ಷೆ ಇದೆ. ಯಶಸ್ವಿ ಜೈಸ್ವಾಲ್ ಬಿರುಸಿನಾಟ ನಡೆಸಿದರೂ ತಂಡದ ಅಗತ್ಯಕ್ಕೆ ಬ್ಯಾಟಿಂಗ್ ನಡೆಬೇಕಿದೆ. ವಿರಾಟ್ ಕೊಹ್ಲಿ, ಶುಭಮಾನ್ ಗಿಲ್ ಅಸ್ಥಿರ ನಿರ್ವಹಣೆ ತಂಡಕ್ಕೆ ಹಿನ್ನಡೆಯಾಗಿದೆ.

ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ರ್ಸ್ರಾಜ್ ಖಾನ್‌ಗೂ ವಾಂಖೆಡೆಯಲ್ಲಿ ತವರಿನ ಮೈದಾನವಾಗಿದ್ದು, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ರಿಷಭ್ ಪಂತ್ ಉತ್ತಮ ಲಯದಲ್ಲಿದ್ದು, ರೋಹಿತ್ ಜತೆಗೆ ಶುಭಮಾನ್ ಗಿಲ್ ಾರ್ಮ್ ಕಂಡುಕೊಂಡರೆ ಭಾರತಕ್ಕೆ ಹೆಚ್ಚಿನ ಬಲ ಸಿಗಲಿದೆ.

ಹದಿನೈದು ದಿನಗಳ ಅಂತರದಲ್ಲಿ ಭಾರತದಲ್ಲಿ ಹೊಸ ಇತಿಹಾಸ ಬರೆದಿರುವ ನ್ಯೂಜಿಲೆಂಡ್ ತಂಡ ಮುಂದಿನ ಐದು ದಿನಗಳಲ್ಲಿ ಟೀಮ್ ಇಂಡಿಯಾವನ್ನು ತವರಿನಲ್ಲಿ ವೈಟ್‌ವಾಷ್‌ಗೆ ಗುರಿಪಡಿಸುವ ಹಂಬಲದಲ್ಲಿದೆ. ಮಿಚೆಲ್ ಸ್ಯಾಂಟ್ನರ್ ಮುಂಬೈನಲ್ಲೂ ಭಾರತೀಯ ಬ್ಯಾಟರ್‌ಗಳಿಗೆ ಸವಾಲೊಡ್ಡುವ ಸಾಧ್ಯತೆಗಳಿವೆ. ಎರಡು ಟೆಸ್ಟ್ ಮುಕ್ತಾಯಕ್ಕೆ ರಚಿನ್ ರವಿಂದ್ರ (247), ಡೆವೊನ್ ಕಾನ್‌ವೇ (201) ಸರಣಿಯ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. 2021ರ ಪ್ರವಾಸದಲ್ಲಿ ಮುಂಬೈನಲ್ಲಿ ಹತ್ತು ವಿಕೆಟ್ ಸಾಧನೆ ಮಾಡಿದ್ದ ಎಜಾಜ್ ಪಟೇಲ್ ಮತ್ತೆ ಈ ಪ್ರದರ್ಶನ ಪುನರಾವರ್ತಿಸುವ ತವಕದಲ್ಲಿದ್ದಾರೆ.

ಟೀಮ್ ನ್ಯೂಸ್

ಭಾರತ: ಆಟಗಾರರ ಕಾರ್ಯದೊತ್ತಡ ತಗ್ಗಿಸಲು ನಿರ್ಧರಿಸಿದರೆ ತಂಡದಲ್ಲಿ ಬದಲಾವಣೆ ಖಚಿತವೆನಿಸಲಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಮುನ್ನ ವೇಗಿ ಜಸ್‌ಪ್ರೀತ್ ಬುಮ್ರಾ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಆಗ ಮೊಹಮದ್ ಸಿರಾಜ್ ತಂಡಕ್ಕೆ ಮರಳಬಹುದು ಅಥವಾ 4ನೇ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಕಣಕ್ಕಿಳಿಯಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ನಿರೀಕ್ಷೆ ಕಡಿಮೆ. ಒಂದು ವೇಳೆ ರ್ಸ್ರಾಜ್ ಅವರನ್ನು ಕೈ ಬಿಟ್ಟರೆ ಕೆಎಲ್ ರಾಹುಲ್ ಮರಳಿ ಸ್ಥಾನ ಪಡೆಯಲಿದ್ದಾರೆ.

ನ್ಯೂಜಿಲೆಂಡ್: ಮೂರನೇ ಪಂದ್ಯಕ್ಕೂ ಅನುಭವಿ ಕೇನ್ ವಿಲಿಯಮ್ಸನ್ ಗೈರಾಗಲಿದ್ದಾರೆ. ಪುಣೆ ಟೆಸ್ಟ್ ತಪ್ಪಿಸಿಕೊಂಡಿದ್ದ ಮ್ಯಾಟ್ ಹೆನ್ರಿ ಫಿಟ್ ಎನಿಸಿದರೆ ಅನುಭವಿ ಟಿಮ್ ಸೌಥಿ ಜಾಗ ಬಿಟ್ಟುಕೊಡಲಿದ್ದಾರೆ. ಉಳಿದಂತೆ ಗೆಲುವಿನ ಕಾಂಬಿನೇಷನ್ ಮುಂದುವರಿಯುವ ಸಾಧ್ಯತೆಗಳಿವೆ.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ

ತವರಿನಲ್ಲಿ ಒಮ್ಮೆ ಮಾತ್ರ ವೈಟ್‌ವಾಷ್

ಭಾರತ ತಂಡ ಇದುವರೆಗೆ ತವರಿನಲ್ಲಿ ಆಡಿದ ಒಂದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಮ್ಮೆ ಮಾತ್ರ ವೈಟ್‌ವಾಷ್ ಮುಖಭಂಗ ಎದುರಿಸಿದೆ. 1999-2000ರಲ್ಲಿ ಭಾರತ, ದ.ಆಫ್ರಿಕಾ ಎದುರು 0-2ರಿಂದ ಸರಣಿ ಸೋಲು ಅನುಭವಿಸಿತ್ತು. ಆದರೆ ಎರಡಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಭಾರತ ಒಮ್ಮೆಯೂ ವೈಟ್‌ವಾಷ್ ಎದುರಿಸಿಲ್ಲ.

ಸ್ಪಿನ್ ಎದುರು ಕೊಹ್ಲಿ ದೌರ್ಬಲ್ಯ

ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ಪಿನ್ನರ್‌ಗಳ ಎದುರು ಕಳಪೆ ದಾಖಲೆ ಹೊಂದಿದ್ದಾರೆ. 2022ರಿಂದ ಇದುವರೆಗೆ ಭಾರತ ಪರ 19 ಟೆಸ್ಟ್ ಆಡಿರುವ ಕೊಹ್ಲಿ, 4 ಅರ್ಧಶತಕ, 2 ಶತಕ ಡಿಸಿದ್ದಾರೆ. ಏಷ್ಯಾದಲ್ಲಿ ಆಡಿರುವ 12 ಪಂದ್ಯಗಳ 19 ಇನಿಂಗ್ಸ್‌ನಲ್ಲಿ 1 ಅರ್ಧಶತಕ, ಶತಕ ಸಿಡಿಸಿರುವ ಕೊಹ್ಲಿ, 16 ಬಾರಿ ಸ್ಪಿನ್ನರ್‌ಗೆ ವಿಕೆಟ್ ನೀಡಿದ್ದಾರೆ. ಹಾಲಿ ಸರಣಿಯ 4 ಇನಿಂಗ್ಸ್‌ನಲ್ಲಿ ಒಮ್ಮೆ ಗ್ಲೆನ್ ಫಿಲಿಪ್ಸ್ ಹಾಗೂ 2 ಬಾರಿ ಮಿಚೆಲ್ ಸ್ಯಾಂಟ್ನರ್‌ಗೆ ಔಟಾಗಿದ್ದಾರೆ. ಆದರೆ ವಾಂಖೆಡೆಯಲ್ಲಿ ಉತ್ತಮ ದಾಖಲೆ ಹೊಂದಿರುವ ಕೊಹ್ಲಿ, ಇಲ್ಲಿ ಆಡಿರುವ 8 ಪಂದ್ಯಗಳಲ್ಲಿ 58.62ರ ಸರಾಸರಿಯಲ್ಲಿ ಮೂರು ಅರ್ಧಶತಕ, ಶತಕ ಸೇರಿ 469 ರನ್ ಕಲೆಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net