ಗೆಲುವಿನ ಹಳಿಗೇರಿದ ಪಂಜಾಬ್ ಕಿಂಗ್ಸ್; ಮುಂಬೈ ಇಂಡಿಯನ್ಸ್ ಎದುರು 9 ವಿಕೆಟ್ ಜಯ

PUNJAB AND MUMBAI FOR WEB
Published on

ಚೆನ್ನೈ: ನಾಯಕ ಕೆಎಲ್ ರಾಹುಲ್ (60*ರನ್, 52 ಎಸೆತ, 3 ಬೌಂಡರಿ, 3 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರಲ್ಲಿ ಗೆಲುವಿನ ಹಳಿಗೇರಿತು. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಕನ್ನಡಿಗ ಕೆಎಲ್ ರಾಹುಲ್ ಬಳಗ 9 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು. ಮತ್ತೊಂದೆಡೆ, ರೋಹಿತ್ ಶರ್ಮ ಬಳಗ ಸತತ 2ನೇ ಸೋಲಿಗೆ ಶರಣಾಯಿತು.

ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ರೋಹಿತ್ ಶರ್ಮ (63ರನ್, 52 ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 6 ವಿಕೆಟ್‌ಗೆ 131 ರನ್‌ಗಳಿಸಿತು. ಪ್ರತಿಯಾಗಿ ಈ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ತಂಡ, ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ ಹಾಗೂ ಕ್ರಿಸ್ ಗೇಲ್ (43*ರನ್, 35ಎಸೆತ, 5 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 132 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಮುಂಬೈ ಇಂಡಿಯನ್ಸ್: 6 ವಿಕೆಟ್‌ಗೆ 131 (ರೋಹಿತ್ ಶರ್ಮ 63, ಸೂರ್ಯಕುಮಾರ್ 33, ಮೊಹಮದ್ ಶಮಿ 21ಕ್ಕೆ 2, ರವಿ ಬಿಷ್ಣೋಯಿ 21ಕ್ಕೆ 2, ಅರ್ಷದೀಪ್ ಸಿಂಗ್ 28ಕ್ಕೆ 1, ದೀಪಕ್ ಹೂಡಾ 15ಕ್ಕೆ 1), ಪಂಜಾಬ್ ಕಿಂಗ್ಸ್ : 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 132 (ಕೆಎಲ್ ರಾಹುಲ್ 60*, ಕ್ರಿಸ್ ಗೇಲ್ 43*, ಮಯಾಂಕ್ ಅಗರ್ವಾಲ್ 25, ರಾಹುಲ್ ಚಹರ್ 19ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net