

ಅಹಮದಾಬಾದ್: ನಾಯಕತ್ವದ ಜವಾಬ್ದಾರಿ ಹೊತ್ತ ಮೊದಲ ಪಂದ್ಯದಲ್ಲೇ ಕರ್ನಾಟಕದ ಮಯಾಂಕ್ ಅಗರ್ವಾಲ್ (99*ರನ್, 58 ಎಸೆತ, 8 ಬೌಂಡರಿ, 4 ಸಿಕ್ಸರ್) ಮಾಂತ್ರಿಕ ಬ್ಯಾಟಿಂಗ್‌ನಿಂದ ಗಮನಸೆಳೆದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ವಿಫಲರಾದರು. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್-14ರ ತನ್ನ 8ನೇ ಪಂದ್ಯದಲ್ಲಿ ಪಂಜಾಬ್ ತಂಡ 7 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶರಣಾಯಿತು. ಇದರೊಂದಿಗೆ ಪ್ರಸಕ್ತ ಲೀಗ್‌ನಲ್ಲಿ ಡೆಲ್ಲಿ ಎದುರು ಆಡಿದ ಎರಡೂ ಹಣಾಹಣಿಯಲ್ಲೂ ಪಂಜಾಬ್ ಸೋಲು ಕಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಕಗಿಸೊ ರಬಾಡ (36ಕ್ಕೆ 3) ಮಾರಕ ದಾಳಿ ನಡುವೆಯೂ 6 ವಿಕೆಟ್‌ಗೆ 166 ರನ್ ಪೇರಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ, ಶಿಖರ್ ಧವನ್ (69*ರನ್, 47 ಎಸೆತ, 6 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್‌ಗಳಿಸಿ ಜಯ ದಾಖಲಿಸಿತು.
ಪಂಜಾಬ್ ಕಿಂಗ್ಸ್: 6 ವಿಕೆಟ್‌ಗೆ 166 (ಮಯಾಂಕ್ ಅಗರ್ವಾಲ್ 99*, ಡೇವಿಡ್ ಮಲಾನ್ 26, ಕಗಿಸೊ ರಬಾಡ 36ಕ್ಕೆ 3), ಡೆಲ್ಲಿ ಕ್ಯಾಪಿಟಲ್ಸ್: 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 167 (ಪೃಥ್ವಿ ಷಾ 39, ಶಿಖರ್ ಧವನ್ 69*, ಸ್ಟೀವನ್ ಸ್ಮಿತ್ 24, ರಿಲಿ ಮೆರಿಡಿತ್ 35ಕ್ಕೆ 1, ಕ್ರಿಸ್ ಜೋರ್ಡಾನ್ 21ಕ್ಕೆ 1, ಹರ್‌ಪ್ರೀತ್ ಬ್ರಾರ್ 19ಕ್ಕೆ 1).