ಸನ್‌ರೈಸರ್ಸ್‌ಗೆ ಪಂಜಾಬ್ ಸವಾಲು ; ಉಭಯ ತಂಡಗಳಿಗೆ ಗೆಲುವೊಂದೇ ಮಾರ್ಗ

sunrisers and punjab for web
Published on

ಶಾರ್ಜಾ: ಸತತ ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-14ರಲ್ಲಿ ಶನಿವಾರದ 2ನೇ ಪಂದ್ಯದಲ್ಲಿ ಎದುರಾಗಲಿವೆ. ಅರಬ್ ನಾಡಿನಲ್ಲಿ ಪುನರಾರಂಭಗೊಂಡ ಎರಡನೇ ಚರಣದ ಆರಂಭಿಕ ಪಂದ್ಯಗಳಲ್ಲಿ ಸೋಲನುಭವಿಸಿರುವ ಉಭಯ ತಂಡಗಳು ಗೆಲುವಿನ ಹಳಿಗೇರುವ ತವಕದಲ್ಲಿವೆ. ಹಿಂದಿನ ಪಂದ್ಯದಲ್ಲಿ ಭರ್ಜರಿ ನಿರ್ವಹಣೆ ನೀಡಿ ಕಡೇ 2 ಓವರ್‌ಗಳಲ್ಲಿ ಕೇವಲ 8 ರನ್ ಗಳಿಸಲು ವಿಫಲವಾಗಿದ್ದ ಪಂಬಾಜ್ ತಂಡದ ಬ್ಯಾಟಿಂಗ್ ವೈಖರಿ ಕ್ರಿಕೆಟ್ ವಲಯದಲ್ಲಿ ಭಾರಿ ಟೀಕೆಗೆ ವ್ಯಕ್ತವಾಗಿತ್ತು.

ಆರಂಭಿಕರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭದ ನಡುವೆಯೂ ಮಧ್ಯಮ ಕ್ರಮಾಂಕದ ನಿಸ್ತೇಜ ನಿರ್ವಹಣೆಯಿಂದ ಪಂಜಾಬ್ ಕಡೇ ಕ್ಷಣದಲ್ಲಿ ಎಡವಿತ್ತು. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭವಾಗಿ ಶರಣಾಗಿದ್ದ ಸನ್‌ರೈಸರ್ಸ್‌ ಬಳಗ ಪುಟಿದೇಳುವ ಹಂಬಲದಲ್ಲಿದೆ. ಉಭಯ ತಂಡಗಳು ಅಂಕಪಟ್ಟಿಯಲ್ಲಿ ಕಡೇ ಎರಡು ಸ್ಥಾನಗಳಲ್ಲಿದ್ದು, ಲೀಗ್ ಹಂತದಲ್ಲಿ ಉಳಿದ ಎಲ್ಲ ಪಂದ್ಯಗಳಲ್ಲಿ ಗೆದ್ದರಷ್ಟೇ ಪ್ಲೇಆಫ್ ಹಂತಕ್ಕೇರುವ ಅವಕಾಶ ಹೊಂದಿವೆ. ಸನ್‌ರೈಸರ್ಸ್‌ ಈ ಪಂದ್ಯದಲ್ಲಿ ಸೋತರೆ ಪ್ರಶಸ್ತಿ ಆಸೆಯನ್ನು ಅಧಿಕೃತವಾಗಿ ಕೈಚೆಲ್ಲಲಿದೆ. ಸೋಲಿನ ನಡುವೆಯೂ ಉಭಯ ತಂಡಗಳಲ್ಲಿ ಬದಲಾವಣೆಯ ಸಾಧ್ಯತೆ ಇಲ್ಲ.

ಮುಖಾಮುಖಿ: 17, ಸನ್‌ರೈಸರ್ಸ್‌: 12, ಪಂಜಾಬ್: 5

ಹಿಂದಿನ ಮುಖಾಮುಖಿ: ಸನ್‌ರೈಸರ್ಸ್‌ ತಂಡಕ್ಕೆ 9 ವಿಕೆಟ್ ಜಯ

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net