

ಮುಂಬೈ: ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಬ್ಯಾಟಿಂಗ್ ವೈಲ್ಯದಿಂದಲೇ ನಿರಾಸೆ ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ ತಂಡ ವಾಂಖೆಡೆ ಮೈದಾನದಲ್ಲೇ ಮತ್ತೊಮ್ಮೆ ಅಬ್ಬರದ ಬ್ಯಾಟಿಂಗ್ ಮೂಲಕ ಗೆಲುವಿನ ಲಯಕ್ಕೆ ಮರಳಿತು. ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ (92ರನ್, 49 ಎಸೆತ, 13 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಡೆಲ್ಲಿ ತಂಡ ಐಪಿಎಲ್-14ರ ತನ್ನ 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ, ಕನ್ನಡಿಗರಾದ ಮಯಾಂಕ್ ಅಗರ್ವಾಲ್ (69ರನ್, 36 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಕೆಎಲ್ ರಾಹುಲ್ (61ರನ್, 51ಎಸೆತ, 7 ಬೌಂಡರಿ, 2ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಲವಾಗಿ 4 ವಿಕೆಟ್‌ಗೆ 195 ರನ್ ಪೇರಿಸಿತು. ಈ ಬೃಹತ್ ಸವಾಲು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್‌ಗಳಲ್ಲಿ 4 ವಿಕೆಟ್‌ಗೆ 198 ರನ್‌ಗಳಿಸಿ ಜಯದ ನಗೆ ಬೀರಿತು.
ಪಂಜಾಬ್ ಕಿಂಗ್ಸ್: 4 ವಿಕೆಟ್‌ಗೆ 195 (ಕೆಎಲ್ ರಾಹುಲ್ 61, ಮಯಾಂಕ್ ಅಗರ್ವಾಲ್ 69, ಗೇಲ್ 11, ದೀಪಕ್ ಹೂಡಾ 22*, ಶಾರುಖ್ ಖಾನ್ 15*, ಕ್ರಿಸ್ ವೋಕ್ಸ್ 42ಕ್ಕೆ 1, ಲುಕ್ಮಾನ್ ಮೆರಿವಾಲಾ 32ಕ್ಕೆ 1), ಡೆಲ್ಲಿ ಕ್ಯಾಪಿಟಲ್ಸ್ : 18.2 ಓವರ್‌ಗಳಲ್ಲಿ 4 ವಿಕೆಟ್‌ಗೆ 198 (ಶಿಖರ್ ಧವನ್ 92, ಪೃಥ್ವಿ ಷಾ 32, ಮಾರ್ಕಸ್ ಸ್ಟೋಯಿನಿಸ್ 27*, ಲಲಿತ್ ಯಾದವ್ 12*, ಜೇ ರಿಚರ್ಡ್‌ಸನ್ 41ಕ್ಕೆ 2, ಅರ್ಷದೀಪ್ ಸಿಂಗ್ 22ಕ್ಕೆ 1, ರಿಲಿ ಮೆರೆಡಿತ್ 35ಕ್ಕೆ 1).