

ಪಾಟಲೀಪುತ್ರ: ಸಂಘಟಿತ ಹಾಗೂ ಅಧಿಕಾರಯುತ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ 97ನೇ ಹಣಾಹಣಿಯಲ್ಲಿ31 ಅಂಕಗಳ ಅಂತರದಿಂದ ದುರ್ಬಲ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ 68 ಅಂಕ ಕಲೆಹಾಕಿದ ಪುಣೇರಿ ಪಲ್ಟನ್ 12 ತಂಡಗಳಿರುವ ಅಂಕಪಟ್ಟಿಯಲ್ಲಿಮತ್ತೆ ಅಗ್ರಸ್ಥಾನಕ್ಕೆರಿದೆ.
ಪಾಟಲೀಪುತ್ರ ಒಳಾಂಗಣ ಕ್ರಿಡಾಂಗಣದಲ್ಲಿಮಂಗಳವಾರ ನಡೆದ ಏಕೈಕ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್ ಎನಿಸಿರುವ ಪುಣೇರಿ ತಂಡ 60-29 ಅಂಕಗಳಿಂದ ಈಗಾಗಲೇ ನಾಕೌಟ್ ಹಂತದಿಂದ ಹೊರಬಿದ್ದಿರುವ ಟೈಟನ್ಸ್ ವಿರುದ್ಧ ಏಕಪಕ್ಷಿಯ ಜಯ ದಾಖಲಿಸಿತು. ಪುಣೇರಿ ತಂಡದ ಪರ ಮೋಹಿತ್ ಗೊಯೆಟ್ (8 ಅಂಕ), ಆಕಾಶ್ ಶಿಂದೆ (11 ಅಂಕ) ಸೂಧಿರ್ತಿದಾಯಕ ಪ್ರದರ್ಶನ ನೀಡಿದರೆ, ನಾಯಕ ಅಸ್ಲಾಮ್ ಮುಸ್ತಾಫಾ, ಅಭಿನಾಷ್, ಮೊಹಮ್ಮದ್ರಜಾ ಕ್ರಮವಾಗಿ 5, 5 ಮತ್ತು 7 ಅಂಕಗಳ ಕೊಡುಗೆ ನೀಡಿದರು.
ಹಾಲಿ ಆವೃತ್ತಿಯ ಅತ್ಯಂತ ಕಳಪೆ ಪ್ರದರ್ಶನ ನೀಡಿದ ತಂಡಗಳಲ್ಲಿಒಂದಾಗಿರುವ ಪವನ್ ಕುಮಾರ್ ಸಾರಥ್ಯದ ಟೈಟನ್ಸ್ ಪರ ಸಂಜೀವ್ ಎಸ್, ಹೊರತುಪಡಿಸಿ ಯಾವೊಬ್ಬ ಆಟಗಾರನು ಐದು ಅಂಕಗಳನ್ನು ದಾಟಲಿಲ್ಲ. ಹಿಂದಿನ ಆವೃತ್ತಿಗಳಲ್ಲಿಸ್ಟಾರ್ ಹಣೆಪಟ್ಟಿ ಪಡೆದಿದ್ದ ಪವನ್ ಕುಮಾರ್ ಸೆಹ್ರಾವತ್ ಈ ಪಂದ್ಯದಲ್ಲೂಸುಧಾರಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಅಸ್ಲಾಮ್ ಮೂಲಕ ಖಾತೆ ತೆರೆದ ಪುಣೇರಿ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು. ಇದರ ಫಲವಾಗಿ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 6 ಮತ್ತು 14ನೇ ನಿಮಿಷದಲ್ಲಿಎರಡು ಬಾರಿ ಆಲೌಟ್ ಮಾಡಿದ ಪಲ್ಟನ್ ತಂಡ, 29-6 ಅಂಕಗಳ ಅಂತರದಲ್ಲಿಮೇಲುಗೈ ಸಾಧಿಸಿತು. ಮಂಗಳವಾರದ ಪಂದ್ಯಕ್ಕೂ ಮುನ್ನ ತಾನಾಡಿದ 16 ಪಂದ್ಯಗಳಲ್ಲಿಕೇವಲ ಎರಡಲ್ಲಿಜಯ ಗಳಿಸಿದ್ದ ಟೈಟನ್ಸ್ ಯಾವುದೇ ಹಂತದಲ್ಲೂಪುಟಿದೇಳುವ ಸಾಮರ್ಥ್ಯ್ ತೋರಲಿಲ್ಲ. ಪಂದ್ಯದುದ್ದಕ್ಕೂ ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಗಮನಾರ್ಹ ಪ್ರದರ್ಶನ ತೋರಿದ ಪುಣೇರಿ ಆಟಗಾರರು ಮೊದಲ ಅವಧಿಯ ಅಂತ್ಯಕ್ಕೆ ಗೆಲುವು ಖಚಿತಪಡಿಸಿಕೊಂಡರು.
23 ಅಂಕಗಳ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಪುಣೇರಿ ತಂಡ ತನ್ನ ಅಧಿಕಾರಯುತ ಪ್ರದರ್ಶನವನ್ನು ಮುಂದುವರಿಸಿತು. ಪುಣೇರಿಯ ಸಂಘಟನಾತ್ಮಕ ಆಟಕ್ಕೆ ಟೈಟನ್ಸ್ ಮತ್ತೆರಡು ಬಾರಿ ಆಲೌಟ್ ಬಲೆಗೆ ಬಿದ್ದಿತು. ಹೀಗಾಗಿ ಪುಣೇರಿ ಆಟಗಾರರ ಮುನ್ನಡೆ 30 ಅಂಕಗಳಿಗೆ ದಾಟಿತು. 30ನೇ ನಿಮಿಷದ ವೇಳೆಗೆ 48-11ರಲ್ಲಿಅಂತರ ಕಾಯ್ದುಕೊಂಡ ಅಸ್ಲಾಮ್ ಬಳಗ, ಪಂದ್ಯ ಮುಕ್ತಾಯಕ್ಕೆ ಇನ್ನೆರಡು ನಿಮಿಷಗಳಿರುವಾಗ ಆಲ್‌ಔಟಾದರೂ ಯಾವುದೇ ಆತಂಕವಿಲ್ಲದೆ ಸುಲಭವಾಗಿ ಪಂದ್ಯ ವಶಪಡಿಸಿಕೊಂಡಿತು. ಪಂದ್ಯದಲ್ಲಿಅಂತಿಮ ಘಟ್ಟದಲ್ಲಿಚುರುಕಿನ ರೇಡಿಂಗ್ ನಡೆಸಿದ ಸಂಜೀವ್ 8 ಅಂಕಗಳನ್ನು ಕಲೆಹಾಕುವ ಮೂಲಕ ಟೈಟನ್ಸ್‌ನ ಹೋರಾಟಕ್ಕೆ ಬಲ ನೀಡಿದರು.
ಜನವರಿ 31ರಂದು ಪಟನಾ ಪೈರೇಟ್ಸ್ ಮತ್ತು ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಮುಖಾಮುಖಿಯಾಗಲಿವೆ.