

ಹರಾರೆ: ತಂಡ ಸಂಕಷ್ಟದಲ್ಲಿದ್ದು, ಯಾರಾದರೂ ಪ್ರಾಯೋಜಕತ್ವ ವಹಿಸಿಕೊಳ್ಳಿ ಎಂದ ಜಿಂಬಾಬ್ವೆ ತಂಡದ ಆಲ್ರೌಂಡರ್ ರ್ಯಾನ್ ರ್ಬಲ್ ಟ್ವಿಟನ್ ಮೂಲಕ ಮಾಡಿಕೊಂಡಿದ್ದ ಮನವಿಗೆ ಪೂಮಾ ಸಂಸ್ಥೆ ಸ್ಪಂದಿಸಿದೆ. 27 ವರ್ಷದ ರ್ಯಾನ್ ಬರ್ಲ್ ಶನಿವಾರವಷ್ಟೇ ತಂಡಕ್ಕೆ ಪ್ರಾಯೋಜಕತ್ವದ ಅಗತ್ಯವಿದ್ದು, ಆಟಗಾರರೂ ಸೂಕ್ತ ಶೂ ಹಾಗೂ ಗ್ಲೌಸ್ಗೂ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಇದೀಗ ತಂಡಕ್ಕೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿರುವ ಪೂಮಾ ಸಂಸ್ಥೆಗೆ ಧನ್ಯವಾದ ಅಪಿರ್ಸಿದ್ದಾರೆ.
ನಾನೀಗ ಪೂಮಾ ಕ್ರಿಕೆಟ್ ತಂಡ ಸೇರಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ಬರ್ಲ್ ಹೇಳಿಕೊಂಡಿದ್ದಾರೆ. ನನ್ನ ಮನವಿಗೆ ಕೇವಲ 24 ಗಂಟೆಗಳಲ್ಲಿ ಸ್ಪಂದಿಸಿದ ಪೂಮಾ ಸಂಸ್ಥೆಗೆ ಅಭಾರಿಯಾಗಿದ್ದೇನೆ ಎಂದು ಎಡಗೈ ಬ್ಯಾಟ್ಸ್ಮನ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಬರ್ಲ್ ಅವರ ಟ್ವೀಟ್ಗೆ ಪ್ರತಿಕ್ರಿಯಸಿದ್ದ ಪೂಮಾ ಕ್ರಿಕೆಟ್, ಇದೀಗ ಹಳೆಯನ್ನು ತೊಡೆದು ಹಾಕುವ ಸಮಯ ಬಂದಿದೆ ಎಂದು ಹೇಳಿತ್ತು.
27 ವರ್ಷದ ರ್ಯಾನ್ ಬರ್ಲ್ ಇದುವರೆಗೂ 3 ಟೆಸ್ಟ್, 18 ಏಕದಿನ ಹಾಗೂ 25 ಟಿ20 ಪಂದ್ಯಗಳನ್ನಾಡಿದ್ದಾರೆ. ತಂಡದ ಇಂಥ ದುಸ್ಥಿತಿಯನ್ನು ಕಂಡು ಕಣ್ಣೀರು ಹಾಕಿದ್ದ ಆಲ್ರೌಂಡರ್ ರ್ಯಾನ್ ಬರ್ಲ್, ಆಟಗಾರರು ಉತ್ತಮ ಶೂಗೂ ಪರಿತಪಿಸುವಂತಾಗಿದೆ ಎಂದು ಹಳೇ ಶೂಗಳಿದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದರು.
ಒಂದು ಕಾಲದಲ್ಲಿ ವಿಶ್ವ ಕ್ರಿಕೆಟ್ನ ಶ್ರೇಷ್ಠ ತಂಡಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಜಿಂಬಾಬ್ವೆ ತಂಡ ಇಂದು ಹೀನಾಯ ಸ್ಥಿತಿ ತಲುಪಿದೆ. ಸ್ಥಳಿಯ ಕ್ರಿಕೆಟ್ ಆಡಳಿತ ಹಾಗೂ ದೇಶದ ರಾಜತಾಂತ್ರಿಕ ಬಿಕ್ಕಟ್ಟೇ ಜಿಂಬಾಬ್ವೆ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಂಬಾಬ್ವೆ ತಂಡ ಸಕ್ರಿಯವಾಗಿದ್ದರೂ ಸೂಕ್ತ ಪ್ರಾಯೋಜಕತ್ವ ಕೊರತೆಯಿಂದ ತತ್ತರಿಸಿದೆ. ಎಷ್ಟೊ ವರ್ಷಗಳಿಂದಲೂ ಪ್ರಾಯೋಜಕರಿಲ್ಲದೇ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯೇ ಸ್ವತಃ ಖಚಿರ್ನಿಂದ ತಂಡವನ್ನು ನಿಭಾಯಿಸುತ್ತಿದೆ.