ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿ

New-Project-2-7
Published on

ಮುಂಬೈ: ಭಾರತದ ದೇಸೀಯ ಕ್ರೀಡೆ ಕಬಡ್ಡಿ ಆಟಗಾರರನ್ನು ದೇಶಕ್ಕೆ ಪರಿಚಯಿಸಿದ ್ರಾಂಚೈಸಿ ಆಧಾರಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಜುಲೈ 26ರಂದು ಭರ್ತಿ 10 ಹತ್ತು ವರ್ಷ ಪೂರೈಸಲಿದ್ದು, ಮುಂಬರುವ 11ನೇ ಆವೃತ್ತಿಗೂ ಮುನ್ನ ಟೂರ್ನಿಯ ನೂತನ ಲಾಂಛನ ಅನಾವರಣದ ಜತೆಗೆ ಆಟಗಾರರ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಲಾಗಿದೆ.

10 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಭಾರತದ ಎರಡನೇ ಲೀಗ್ ಎಂಬ ಖ್ಯಾತಿ ಪಡೆದಿರುವ ಪ್ರೊ ಕಬಡ್ಡಿ ಟೂರ್ನಿಯ 11ನೇ ಆವೃತ್ತಿ ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್ 15 ಮತ್ತು 16 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಆಯೋಜಕ ಮಶಾಲ್ ಸ್ಪೋರ್ಟ್ಸ್ ಸಂಸ್ಥೆ ಗುರುವಾರ ತಿಳಿಸಿದೆ. ಮುಂಬರುವ ಆವೃತ್ತಿಯ ನೂತನ ಲಾಂಛನದಲ್ಲಿ ತ್ರಿವರ್ಣ ಧ್ವಜ ಹೋಲುವ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಪ್ರದರ್ಶಿಸಲಾಗಿದೆ. ಕಬಡ್ಡಿ ದೇಶದ ಹೆಮ್ಮೆಯ ಕ್ರೀಡೆ ಎಂಬುದನ್ನು ಇದು ಸಾರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net