

ಹೈದರಾಬಾದ್: ಕಳೆದ ಕೆಲ ತಿಂಗಳಿನಿಂದ ಟಿ20 ವಿಶ್ವಕಪ್, ಒಲಿಂಪಿಕ್ಸ್‌ನಂಥ ಜಾಗತಿಕ ಕ್ರೀಡಾಕೂಟದಲ್ಲಿ ಮುಳುಗಿದ್ದ ಕ್ರೀಡಾಭಿಮಾನಿಗಳಿಗೆ ಶುಕ್ರವಾರದಿಂದ ನಮ್ಮ ಮಣ್ಣಿನ ದೇಸಿ ಕ್ರೀಡೆಯ ರೋಮಾಂಚಕ ಕ್ಷಣಗಳನ್ನು ಆನಂದಿಸುವ ಸಮಯ ಆರಂಭವಾಗಲಿದೆ. ಯಶಸ್ವಿ 10 ವರ್ಷ ಪೂರೈಸಿರುವ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತಿಗೆ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಚಾಲನೆ ದೊರೆಯಲಿದೆ.
ಮೆಗಾ ಹರಾಜು ಪ್ರಕ್ರಿಯೆ ಬಳಿಕ ಯುವ ಹಾಗೂ ಅನುಭವಿ ಆಟಗಾರರಿಂದ ತಂಡಗಳನ್ನು ಸಜ್ಜುಗೊಳಿಸಿರುವ 12 ್ರಾಂಚೈಸಿಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಸೆಣಸಲಿದ್ದು, ಸ್ಟಾರ್ ರೈಡರ್‌ಗಳಾದ ಪವನ್ ಸೆಹ್ರಾವತ್ ಮತ್ತು ಪ್ರದೀಪ್ ನರ್ವಾಲ್ ನಡುವಿನ ಮುಖಾಮುಖಿಯೂ ಕುತೂಹಲ ಕೆರಳಿಸಿದೆ. ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದಲ್ಲಿ ಪುಣೇರಿ ಪಲ್ಟಾನ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.
ಮೂರು ನಗರಗಳ ಆತಿಥ್ಯ: ಕಳೆದ ಬಾರಿ ಕ್ಯಾರವಾನ್ ಮಾದರಿಗೆ ಮರಳಿದ್ದ ಟೂರ್ನಿ ಈ ಬಾರಿ ಮೂರು ತಾಣಗಳಲ್ಲಿ ಮಾತ್ರ ನಡೆಯಲಿದೆ.
12 ತಂಡಗಳು ಡಬಲ್ ರೌಂಡ್ ರಾಬಿನ್ ಮಾದರಿ ಲೀಗ್‌ನಲ್ಲಿ ತಲಾ 22 ಪಂದ್ಯಗಳನ್ನು ಆಡಲಿವೆ. ಅಂಕಪಟ್ಟಿಯ ಅಗ್ರ 6 ತಂಡಗಳು ಪ್ಲೇಆ್ಗೆ ಅರ್ಹತೆ ಪಡೆಯಲಿವೆ. ಸದ್ಯಕ್ಕೆ ಲೀಗ್ ಹಂತದ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದ್ದು, ಟೂರ್ನಿ ಆರಂಭಿಕ ಹಂತದ ಬಳಿಕ ಪ್ಲೇಆ್ ಪಂದ್ಯಗಳ ವೇಳಾಪಟ್ಟಿ, ಆತಿಥೇಯ ತಾಣವನ್ನು ಹೆಸರಿಸುವ ನಿರೀಕ್ಷೆ ಇದೆ.
ಇಂದಿನ ಪಂದ್ಯಗಳು
ತೆಲುಗು ಟೈಟಾನ್ಸ್-ಬೆಂಗಳೂರು ಬುಲ್ಸ್
ಆರಂಭ: ರಾತ್ರಿ 8.00
ದಬಾಂಗ್ ಡೆಲ್ಲಿ- ಯು ಮುಂಬಾ
ಆರಂಭ: ರಾತ್ರಿ 9.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್