11ನೇ ಆವೃತ್ತಿಯ ಪ್ರೊ ಕಬಡ್ಡಿಗೆ ದಿನಾಂಕ ನಿಗದಿ: ತಯಾರಿ ಆರಂಭಿಸಿದ ಬುಲ್ಸ್

New-Project-1-2
Published on

ಮುಂಬೈ: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಗೆ ಅಕ್ಟೋಬರ್ 18ರಂದು ಚಾಲನೆ ದೊರೆಯಲಿದೆ ಎಂದು ಟೂರ್ನಿಯ ಆಯೋಜಕ ಮಶಾಲ್ ಸ್ಪೋಟ್ಸ್ ಸಂಸ್ಥೆ ಮಂಗಳವಾರ ಪ್ರಕಟಿಸಿದೆ. ಯಶಸ್ವಿ 10 ಆವೃತ್ತಿಗಳನ್ನು ಪೂರೈಸಿರುವ ಪ್ರೊ ಕಬಡ್ಡಿ ಲೀಗ್ ಕ್ಯಾರವಾನ್ ಮಾದರಿಯಲ್ಲಿ 3 ನಗರಗಳಲ್ಲಿ ಮಾತ್ರ ಈ ಬಾರಿ ನಡೆಯಲಿದೆ.

ಹೈದರಾಬಾದ್‌ನಲ್ಲಿ ಮೊದಲ ಚರಣ ಆರಂಭವಾಗಲಿದ್ದು, ನಂತರ ನವೆಂಬರ್ 10ರಿಂದ ನೋಯ್ಡ ಹಾಗೂ ಡಿಸೆಂಬರ್ 3 ರಂದು ಪುಣೆಯಲ್ಲಿ ನಿಗದಿಯಾಗಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಆಗಸ್ಟ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 8 ಆಟಗಾರರು ಒಂದು ಕೋಟಿ ರೂ.ಗೂ ಅಧಿಕ ಮೊತ್ತ ಪಡೆದುಕೊಂಡಿದ್ದು, ಪುಣೇರಿ ಪಲ್ಟಾನ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.ಕಳೆದ ಆವೃತ್ತಿಗೆ 12 ನಗರಗಳು ಆತಿಥ್ಯವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net