

ಬೆಂಗಳೂರು: ಮುಂಬರುವ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಸೋಮವಾರ ಹಾಗೂ ಮಂಗಳವಾರ ಮುಂಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಸ್ಟಾರ್ ಆಟಗಾರರಾದ ಪವನ್ ಶೆರಾವತ್, ವಿಕಾಸ್ ಖಂಡೋಲಾ, ಇರಾನ್ ಫಜಲ್ ಅತ್ರಾಚಲಿ ಸೇರಿ ದೇಶೀಯ ಆಟಗಾರರು ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲಾಗುವ ನಿರೀಕ್ಷೆ ಇದೆ. ಪಿಕೆಎಲ್‌ನ 12 ತಂಡಗಳು ಬಹುತೇಕ ಆಟಗಾರರನ್ನು ಬಿಡುಗಡೆ ಮಾಡಿವೆ. 500ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ತಂಡಗಳಿಗೆ ಒಟ್ಟು 3 ಕೆಟಗರಿಯಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಎಲ್ಲ 12 ್ರಾಂಚೈಸಿಗಳು ಹೊಸ ಆವೃತ್ತಿಗೆ ನೂತನ ತಂಡ ಸಿದ್ಧಗೊಳಿಸಬೇಕಿದೆ. ಟೂರ್ನಿಯ ಯಶಸ್ವಿ 10 ವರ್ಷ ಪೂರೈಸಿದ ಹಿನ್ನಲೆ ಹಾಲಿ ಆವೃತ್ತಿಯ ಹೊಸ ಲಾಂಛನ ಅನಾವರಣಗೊಳಿಸಲಾಗುವುದು ಎನ್ನಲಾಗಿದೆ. ಪ್ರತಿ ತಂಡಗಳು ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಕೊಂಡುಕೊಳ್ಳಬಹುದು. ಖೇಲೋ ಇಂಡಿಯಾ ಗೇಮ್ಸ್‌ನ ೈನಲ್ ಆಡಿದ ಆಗ್ರ 2 ತಂಡಗಳ 24 ಆಟಗಾರರು ಹರಾಜಿಗೆ ಒಳಪಡಲಿದ್ದಾರೆ. ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 12 ತಂಡಗಳು 22 ಎಲೈಟ್ ಆಟಗಾರರ ಸಹಿತ ಒಟ್ಟು 84 ಆಟಗಾರರನ್ನು ರಿಟೇನ್ ಮಾಡಿಕೊಂಡಿವೆ.
4 ಕೆಟಗರಿ
ಎ, ಬಿ, ಸಿ ಹಾಗೂ ಡಿ ವಿಭಾಗಗಳಾಗಿ ನಾಲ್ಕು ಕೆಟಗೆರಿಯಲ್ಲಿ ಆಟಗಾರರನ್ನು ವಿಂಗಡಿಸಲಾಗಿದೆ. ಆಟಗಾರರಿಗೆ ಕ್ರಮವಾಗಿ 13 ಮತ್ತು 9 ಲಕ್ಷ ರೂಪಾಯಿ ಮೂಲಬೆಲೆ ನಿಗದಿಪಡಿಸಲಾಗಿದೆ. ಎಲ್ಲ ್ರಾಂಚೈಸಿಗಳು 5 ಕೋಟಿ ರೂಪಾಯಿ ಬಜೆಟ್ ಮಿತಿ ಹೊಂದಿವೆ. ಮೊದಲ ದಿನ ಎ ಮತ್ತು ಬಿ ಕೆಟಗರಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಎರಡನೇ ದಿನ ಸಿ ಮತ್ತು ಡಿ ಕೆಟಗರಿ ಆಟಗಾರರ ಹರಾಜು ನಡೆಯಲಿದೆ. 2022ರ ಹರಾಜಿನಲ್ಲಿ ಪವನ್ ಶೆರಾವತ್ 2.26 ಕೋಟಿ ರೂ.ಗೆ ತಮಿಳ್ ತಲೈವಾಸ್ ತಂಡಕ್ಕೆ ಬಿಕರಿಯಾಗುವ ಮೂಲಕ ಟೂರ್ನಿ ಇತಿಹಾಸದ ದುಬಾರಿ ಆಟಗಾರ ಎನಿಸಿದ್ದರು.
*ಹರಾಜು ಪ್ರಕ್ರಿಯೆ ಆರಂಭ:
ಸೋಮವಾರ ರಾತ್ರಿ 8ರಿಂದ
(ಎ-ಬಿ ಕೆಟಗರಿ ಆಟಗಾರರು)
ಮಂಗಳವಾರ: ಬೆಳಗ್ಗೆ 10ರಿಂದ
(ಸಿ-ಡಿ ಕೆಟಗರಿ ಆಟಗಾರರು)
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್