ಅಧಿಕ ತೂಕ, ಅಶಿಸ್ತಿನ ಕಾರಣದಿಂದಾಗಿ ಮುಂಬೈ ತಂಡದಿಂದಲೂ ಪೃಥ್ವಿ ಷಾ ಔಟ್​!

web pruth
Published on

ಮುಂಬೈ: ಅಧಿಕ ತೂಕದಿಂದಾಗಿ ಫಿಟ್ನೆಸ್​ ಸಮಸ್ಯೆ ಮತ್ತು ಅಶಿಸ್ತಿನ ವರ್ತನೆಯ ಕಾರಣ ಕಾರಣದಿಂದಾಗಿ ಬ್ಯಾಟರ್​ ಪೃಥ್ವಿ ಷಾ ಅವರನ್ನು ರಣಜಿ ಟ್ರೋಫಿಯ 3ನೇ ಲೀಗ್​ ಪಂದ್ಯಕ್ಕೆ ಹಾಲಿ ಚಾಂಪಿಯನ್​ ಮುಂಬೈ ತಂಡದಿಂದ ಕೈಬಿಡಲಾಗಿದೆ. 2 ವಾರಗಳ ಫಿಟ್ನೆಸ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೂಕ ತಗ್ಗಿಸಿಕೊಳ್ಳುವಂತೆ ಪೃಥ್ವಿ ಷಾಗೆ ಮುಂಬೈ ಕ್ರಿಕೆಟ್​ ಸಂಸ್ಥೆ ಸೂಚಿಸಿದೆ.

24 ವರ್ಷದ ಪೃಥ್ವಿ ಷಾ ಮುಂಬೈ ತಂಡದ ಮೊದಲ 2 ಪಂದ್ಯಗಳಲ್ಲಿ 59 ರನ್​ (7, 12, 1, 39) ಮಾತ್ರ ಗಳಿಸಿದ್ದಾರೆ. ಭಾರತ ಪರ 5 ಟೆಸ್ಟ್​, 6 ಏಕದಿನ, 1 ಟಿ20 ಪಂದ್ಯ ಕೂಡ ಆಡಿರುವ ಈ ಹಿಂದೆಯೂ ಫಿಟ್ನೆಸ್​ ಮತ್ತು ಅಶಿಸ್ತಿನ ಸಮಸ್ಯೆ ಎದುರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net