ಭಾರತ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ: ಯುವ ಬ್ಯಾಟರ್‌ಗೆ ಸಾರಥ್ಯ

New-Project-12
Published on

ನವದೆಹಲಿ: ಬೆನ್ನುನೋವಿನ ಶಸ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಲೆಗ್ ಸ್ಪಿನ್ನರ್ ರಶೀದ್ ಖಾನ್ ಆತಿಥೇಯ ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ 19 ಆಟಗಾರರ ಅ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುವ ಬ್ಯಾಟರ್ ಇಬ್ರಾಹಿಂ ಜದ್ರಾನ್ ಹಂಗಾಮಿ ನಾಯಕನಾಗಿ ತಂಡ ಮುನ್ನಡೆಸಲಿದ್ದಾರೆ. ರಶೀದ್ ಖಾನ್ ಟಿ20 ತಂಡದ ಕಾಯಂ ನಾಯಕರಾಗಿದ್ದು, ಇವರ ಗೈರಿನಲ್ಲಿ ಯುಎಇ ಸರಣಿಗೆ ಇಬ್ರಾಹಿಂ ಸಾರಥ್ಯವಹಿಸಿದ್ದರು. ಭಾರತದ ಪ್ರವಾಸಕ್ಕೆ ರಶೀದ್ ಖಾನ್ ಆಯ್ಕೆಯಾಗಿದ್ದರೂ ಸರಣಿಯಲ್ಲಿ ಆಡುವುದು ಖಚಿತವಿಲ್ಲ. ಜ.11ರಂದು ಮೊಹಾಲಿಯಲ್ಲಿ ಮೊದಲ ಪಂದ್ಯ ನಡೆಯಲಿದೆ.

ತಂಡ: ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಜ್ (ವಿ.ಕೀ), ಇಕ್ರಾಂ ಅಲಿಖಿಲ್ (ವಿ.ಕೀ), ಹಜರತ್ ಉಲ್ಲಾ ಜಾಜಿ, ರಹಮತ್ ಷಾ, ನಜಿಬುಲ್ಲಾ ಜದ್ರಾನ್, ಮೊಹಮದ್ ನಬೀ, ಕರೀಮ್ ಜನ್ನತ್, ಅಜಮತ್ ಉಲ್ಲಾ ಒಮರ್ಜಾಯಿ, ಶರ್‌ುದ್ದೀನ್ ಆಶ್ರ್, ಮುಜೀಬ್ ಉರ್ ರಹಮಾನ್, ಜಲ್ ಹಕ್ ಾರೂಖಿ, ರೀದ್ ಅಹಮದ್, ನವೀನ್ ಉಲ್ ಹಕ್,ನೂರ್ ಅಹ್ಮದ್, ಮೊಹಮದ್ ಸಲೀಂ, ಕೈಸ್ ಅಹ್ಮದ್, ಗುಲ್‌ಬದ್ದೀನ್ ನೈಬ್, ರಶೀದ್ ಖಾನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net