

ಜೈಪುರ: 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಉತ್ತೇಜನಗೊಂಡು ಭಾರತದಲ್ಲಿ ಹಲವು ಕ್ರೀಡಾಲೀಗ್‌ಗಳು ಆರಂಭಗೊಂಡಿವೆ. ಇದೀಗ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಕ್ರೀಡಾಲೀಗ್ ಆರಂಭಗೊಳ್ಳುತ್ತಿದೆ. ಇದೇ ಡಿಸೆಂಬರ್ 24 ರಂದು ಚೊಚ್ಚಲ ಆವೃತ್ತಿಯ ಪ್ರೀಮಿಯರ್ ಹ್ಯಾಂಡ್‌ಬಾಲ್ ಲೀಗ್‌ಗೆ (ಪಿಎಚ್‌ಎಲ್) ಚಾಲನೆ ನೀಡಲಾಗುತ್ತಿದೆ. ಡಿಸೆಂಬರ್ 24 ರಿಂದ ಜನವರಿ 10 ರವರೆಗೆ ರಾಜಸ್ಥಾನದ ಜೈಪುರದ ಸವಾಯಿ ಮಾನ್‌ಸಿಂಗ್ ಒಳಾಂಗಣ ಸ್ಟೇಡಿಯಂನಲ್ಲಿ ಹ್ಯಾಂಡ್‌ಬಾಲ್ ಲೀಗ್ ನಡೆಯಲಿದೆ.
ಭಾರತೀಯ ಹ್ಯಾಂಡ್‌ಬಾಲ್ ಫೆಡರೇಷನ್ ಸಹಯೋಗದಲ್ಲಿ ಲೀಗ್ ನಡೆಯಲಿದ್ದು, 18 ದಿನಗಳ ಅಂತರದಲ್ಲಿ 33 ಪಂದ್ಯಗಳು ನಡೆಯಲಿವೆ. ಭಾರತೀಯ ಹ್ಯಾಂಡ್‌ಬಾಲ್ ಲೀಗ್ ಇತಿಹಾಸದಲ್ಲೇ ಇದೊಂದು ಮಹತ್ತರ ಟೂರ್ನಿ ಇದಾಗಲಿದೆ. ಕೆಳ ಹಂತದ ಆಟಗಾರರಿಗೆ ಇದು ಅನುಕೂಲವಾಗಲಿದೆ ಎಂದು ಎಚ್ಎಫ್ ಐ ಅಧ್ಯಕ್ಷ ಜಗನ್ ಮೋಹನ್ ರಾವ್ ತಿಳಿಸಿದ್ದಾರೆ. ಪುರುಷರ ಆರು ತಂಡಗಳು ಚೊಚ್ಚಲ ಆವೃತ್ತಿಯಲ್ಲಿ ಕಣಕ್ಕಿಳಿಯಲಿವೆ. ತೆಲಂಗಾಣ ಟೈಗರ್ಸ್, ಯುಪಿ ಐಕಾನ್ಸ್, ಮಹಾರಾಷ್ಟ್ರ ಹ್ಯಾಂಡ್‌ಬಾಲ್ ಹುಸ್ಟ್‌ಲೆರ್ಸ್, ಕಿಂಗ್ ಹವಾಕ್ಸ್ ರಾಜಸ್ಥಾನ, ಬೆಂಗಾಲ್ ಬ್ಲೂಸ್ ಹಾಗೂ ಪಂಜಾಭ್ ಪಿಟ್‌ಬುಲ್ಸ್ ಪ್ರಶಸ್ತಿಗಾಗಿ ಸೆಣಸಲಿವೆ. ಪ್ರತಿ ತಂಡದಲ್ಲಿ 14 ಆಟಗಾರರು ಇರಲಿದ್ದು, ಒಟ್ಟು 80 ಆಟಗಾರರು ಲೀಗ್‌ನಲ್ಲಿ ಆಡಲಿದ್ದಾರೆ ಎಂದರು.
ಸುಮಾರು 80 ಸಾವಿರ ಆಟಗಾರರು ನೋಂದಣಿ ಮಾಡಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲೀಗ್ ಆಯೋಜಿಸುವ ಗುರಿಯಿದೆ ಎಂದು ಫೆಡರೇಷನ್ ತಿಳಿಸಿದೆ. ಪಿಎಚ್‌ಎಲ್ ಇಂಡಿಯಾ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಲೀಗ್‌ನ ಅಧಿಕೃತ ಮಾನ್ಯತೆ ಹೊಂದಿದೆ. ಸೋನಿ ಪಿಶ್ಚರ್ಸ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೀಗ್ ನೇರ ಪ್ರಸಾರ ಕಾಣಸಲಿದೆ.