

Preity Zinta: ನಿನ್ನೆ (ಮೇ.24) ನಡೆದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಡಿಸಿ 6 ವಿಕೆಟ್ಗಳ ಜಯ ದಾಖಲಿಸಿತು. ಆದರೆ, ಪಂದ್ಯದ ವೇಳೆ ಆದ ಎಡವಟ್ಟಿಗೆ ಇದೀಗ ಪಂಜಾಬ್ ಕಿಂಗ್ಸ್ ಸಹ ಮಾಲೀಕರಾದ ಪ್ರೀತಿ ಜಿಂಟಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದ ಪಂಜಾಬ್ ಕಿಂಗ್ಸ್, ಈ ಬೃಹತ್ ಗುರಿಯನ್ನು ಬೆನ್ನತ್ತುವಂತೆ ಡಿಸಿಗೆ ಸವಾಲು ಹಾಕಿತು. ಅಂತೆಯೇ ಅಬ್ಬರದ ಬ್ಯಾಟಿಂಗ್ ನಡೆಸಿದ ಡೆಲ್ಲಿ ಪಡೆ, 19.3 ಓವರ್ನಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ಇನ್ನು ಪಂದ್ಯ ಸೋತ ಬೆನ್ನಲ್ಲೇ ಅಂಪೈರ್ ಮಾಡಿದ ಎಡವಟ್ಟನ್ನು ಎತ್ತಿಹಿಡಿದ ಪ್ರೀತಿ ಜಿಂಟಾ, 15ನೇ ಓವರ್ನಲ್ಲಿ ಪಂಜಾಬ್ ಪರ ಬ್ಯಾಟ್ ಮಾಡುತ್ತಿದ್ದ ಶಶಾಂಕ್ ಸಿಂಗ್, ಸಿಕ್ಸರ್ ಶಾಟ್ ಬಾರಿಸಿದರು. ಬೌಂಡರಿ ಲೈನ್ನಲ್ಲಿ ನಿಂತಿದ್ದ ಕರುಣ್ ಕ್ಯಾಚ್ ಹಿಡಿದರು. ಆದರೆ, ಇದನ್ನು ಔಟ್ ಎಂದು ಘೋಷಿಸಿದ ಅಂಪೈರ್ ವಿರುದ್ಧ ಸದ್ಯ ಪ್ರೀತಿ ತಾಳ್ಮೆ ಕಳೆದುಕೊಂಡಿದ್ದಾರೆ.
ಶಶಾಂಕ್ ಸಿಡಿಸಿದ ಶಾಟ್ ಬೌಂಡರಿ ಲೈನ್ನತ್ತ ಸಮೀಪಿಸುತ್ತಿದ್ದಂತೆ ಕರುಣ್ ಕ್ಯಾಚ್ ಹಿಡಿದರು. ಆದರೆ, ಇದು ಸಿಕ್ಸ್ ಎಂದು ಸ್ವತಃ ಕರುಣ್ ಅಂಪೈರ್ಗೆ ಸನ್ನೆ ಮಾಡಿ ತೋರಿಸಿದರು. ಇದನ್ನು ಗಮನಿಸಿದ ಆನ್-ಫೀಲ್ಡ್ ಅಂಪೈರ್ ಗೊಂದಲದಲ್ಲಿ ಥರ್ಡ್ ಅಂಪೈರ್ ಬಳಿ ರಿವ್ಯೂವ್ ಕೇಳಿದರು. ಹಲವು ಆಯಾಮಗಳಲ್ಲಿ ನೋಡಿದ ಬಳಿಕ ಅಂಪೈರ್ ಶಶಾಂಕ್ ಸಿಂಗ್ರನ್ನು ಔಟ್ ಎಂದು ಘೋಷಿಸಿದರು. ಈ ನಿರ್ಣಯಕ್ಕೆ ತೀವ್ರ ಬೇಸರಗೊಂಡ ಪ್ರೀತಿ, ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).